ಲಂಚ ಪ್ರಕರಣ: ಸಿಬಿಐನಿಂದ ಗೇಲ್‌ ನಿರ್ದೇಶಕನ ಇ.ಎಸ್.ರಂಗನಾಥನ್ ಬಂಧನ - Mahanayaka
5:49 AM Tuesday 16 - September 2025

ಲಂಚ ಪ್ರಕರಣ: ಸಿಬಿಐನಿಂದ ಗೇಲ್‌ ನಿರ್ದೇಶಕನ ಇ.ಎಸ್.ರಂಗನಾಥನ್ ಬಂಧನ

e s ranganathan
16/01/2022

ನವದೆಹಲಿ: ಲಂಚ ಪ್ರಕರಣದಲ್ಲಿ ಗೇಲ್‌ನ ಮಾರ್ಕೆಟಿಂಗ್ ನಿರ್ದೇಶಕ ಇ.ಎಸ್.ರಂಗನಾಥನ್ ಅವರನ್ನು ಕೇಂದ್ರೀಯ ತನಿಖಾ ದಳ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Provided by

ರಂಗನಾಥನ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿ 1.3 ಕೋಟಿ ರೂ.ನ್ನು ವಶಪಡಿಸಿಕೊಂಡಿತ್ತು. ದೆಹಲಿಯಲ್ಲಿರುವ ರಂಗನಾಥನ್ ನಿವಾಸ ಕಚೇರಿ ಮತ್ತು ನೋಯ್ಡಾದಲ್ಲಿರುವ ನಿವಾಸವನ್ನು ಸಿಬಿಐ ಶೋಧಿಸಿದೆ.

ಕೇಂದ್ರ ತನಿಖಾ ಸಂಸ್ಥೆಯು ಗೇಲ್‌ನ ಮಾರ್ಕೆಟಿಂಗ್ ನಿರ್ದೇಶಕ ಇ.ಎ.ಸ್.ರಂಗನಾಥನ್ ಮತ್ತು ಇತರ ಹಲವಾರು ಉದ್ಯಮಿಗಳು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಪಿಎಸ್‌ ಯು ಮಾರಾಟ ಮಾಡುವ ಪೆಟ್ರೋ-ಕೆಮಿಕಲ್ ಉತ್ಪನ್ನಗಳನ್ನು ಖರೀದಿಸುವ ಖಾಸಗಿ ಕಂಪೆನಿಗಳಿಂದ 50 ಲಕ್ಷಕ್ಕೂ ಹೆಚ್ಚು ಲಂಚ ಪಡೆದ ಆರೋಪದಲ್ಲಿ ಪ್ರಕರಣ ದಾಖಲಿಸಿದೆ.

ಖಾಸಗಿ ಕಂಪೆನಿಯೊಂದರ ಪ್ರತಿನಿಧಿಗಳ ನಿರ್ದೇಶನದ ಮೇರೆಗೆ ಮಧ್ಯವರ್ತಿ ರಂಗನಾಥನ್‌ಗೆ ಪೆಟ್ರೋ ಕೆಮಿಕಲ್‌ನಲ್ಲಿ ಖರೀದಿದಾರರಿಗೆ ಸ್ವಲ್ಪ ರಿಯಾಯಿತಿ ನೀಡುವಂತೆ ಮನವಿ ಮಾಡಿದರು ಎಂದು ಕೇಂದ್ರ ಸಂಸ್ಥೆ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೆಳಗಾವಿಯಲ್ಲಿ ಮತ್ತೆ ಕನ್ನಡ ನಾಮಫಲಕಕ್ಕೆ ಮಸಿ ಬಳಿದ ಕಿಡಿಗೇಡಿಗಳು

ಹೆಬ್ರಿ: ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಐಪಿಎಸ್ ಅಧಿಕಾರಿ

ಟೆಸ್ಟ್ ನಾಯಕತ್ವಕ್ಕೆ ವಿರಾಟ್‌ ಕೊಹ್ಲಿ ದಿಢೀರ್‌ ರಾಜೀನಾಮೆ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದೇನು?

ಪ್ರಚೋದನಾಕಾರಿ ಭಾಷಣ: ಧಾರ್ಮಿಕ ಮುಖಂಡ ಯತಿ ನರಸಿಂಗಾನಂದ ಬಂಧನ

 

ಇತ್ತೀಚಿನ ಸುದ್ದಿ