ಓಣಂ ಎಫೆಕ್ಟ್: ಕೇರಳ ಗಡಿ ಭಾಗದಲ್ಲಿ ಮದ್ಯ ಸಾಗಾಟಗಾರರ ಮೇಲೆ ಪೊಲೀಸರ ಹದ್ದಿನ ಕಣ್ಣು!
25/08/2023
ಆ.28ರಂದು ಕೇರಳದಲ್ಲಿ ಓಣಂ ಆಚರಣೆ ಹಿನ್ನಲೆ ಅಕ್ರಮ ಮದ್ಯ ಸೇರಿದಂತೆ ಇನ್ನಿತರ ಚಟುವಟಿಕೆ ಮೇಲೆ ತೀವ್ರ ನಿಗಾವಹಿಸುವ ಉದ್ಧೇಶದಿಂದ ಕರ್ನಾಟಕ ಹಾಗು ಕೇರಳ ಅಬಕಾರಿ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿ, ಕೇರಳ ಗಡಿಯಲ್ಲಿ ವಾಹನ ತಪಾಸಣೆ ಬಿಗಿಗೊಳಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಗಡಿಗೆ ಹೊಂದಿಕೊಂಡತ್ತಿರುವ ಮುತ್ತಂಗ ಚೆಕ್ ಪೋಸ್ಟ್ ನಲ್ಲಿ ಚಾಮರಾಜನಗರದ ಅಬಕಾರಿ ಪೊಲೀಸ್ ನಿರೀಕ್ಷಕರು ಹಾಗೂ ಕೇರಳದ ವೈನಾಡಿನ ಅಬಕಾರಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೇರಳ ಪ್ರವೇಶಿಸುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸಿ, ಅಕ್ರಮ ಮದ್ಯ ಸಾಗಾಟ ಸೇರಿದಂತೆ ಇನ್ನಿತರ ವಸ್ತು ಸಾಗಣೆ ಕಂಡು ಬಂದರೆ ಬಿಸಿ ಮುಟ್ಟಿಸುತ್ತಿದ್ದಾರೆ.
ಆದರೆ ತಪಾಸಣೆ ವೇಳೆ ಯಾವುದೇ ಮದ್ಯ ಸಾಗಾಟ ಕಂಡುಬಂದಿಲ್ಲ. ಆದರೂ ಕೂಡ ಓಣಂ ಮುಗಿಯುವವರೆಗೆ ಹದ್ದಿನ ಕಣ್ಣಿಡಲಾಗಿದೆ ಎಂದು ಅಬಕಾರಿ ಆಯುಕ್ತ ನಾಗಶಯನ ಹೇಳಿದ್ದಾರೆ.



























