ಭೀಕರ ಅಪಘಾತ: ಇಬ್ಬರು ಬಜರಂಗದಳದ ಮುಖಂಡರ ದಾರುಣ ಸಾವು - Mahanayaka

ಭೀಕರ ಅಪಘಾತ: ಇಬ್ಬರು ಬಜರಂಗದಳದ ಮುಖಂಡರ ದಾರುಣ ಸಾವು

bajarangadal
02/12/2021


Provided by

ಇಂದೋರ್:  ಹಸುಗಳಿಗೆ ಕಾರು ಡಿಕ್ಕಿಯಾದ ಪರಿಣಾಮ ಇಬ್ಬರು ಬಜರಂಗದಳದ ಮುಖಂಡರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ರಾಜ್ ಗಢದಲ್ಲಿ ನಡೆದಿದ್ದು, ಇವರ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬಜರಂಗದಳದ ಸಹ ಸಂಚಾಲಕ ಲೇಖ್ ರಾಜ್ ಸಿಸೋಡಿಯಾ ಮತ್ತು ಹಿಂದೂ ಜಾಗರಣ ಮಂಚ್ ನ ಪ್ರಧಾನ ಕಾರ್ಯದರ್ಶಿ ಎನ್ನಲಾಗಿರುವ  ಲಖನ್ ನೇಜರ್ ಎಂದು ಗುರುತಿಸಲಾಗಿದೆ.

ವರದಿಗಳ ಪ್ರಕಾರ ಇಲ್ಲಿನ ಬರ್ಖೇಡಾ ಗ್ರಾಮದ ಬಳಿಯಲ್ಲಿ ಈ ಘಟನೆ ನಡೆದಿದ್ದು, ಹಸುಗಳು ರಸ್ತೆಯಲ್ಲಿ ಅಡ್ಡ ಬಂದ ವೇಳೆ ಈ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಅಪಘಾತಕ್ಕೀಡಾಗಿದೆ. ಅಪಘಾತದ ತೀವ್ರತೆಗೆ ಕಾರು ಇಲ್ಲಿದ್ದ ಬಾವಿಯೊಂದರೊಳಗೆ ಬಿದ್ದಿದೆ ಎಂದು ಹೇಳಲಾಗಿದೆ.

ಕಾರು ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆಯೇ ಅಪಾಯವನ್ನು ಅರಿತ ಕಾರು ಚಾಲಕ ಕಾರಿನಿಂದ ಹಾರಿದ್ದಾನೆ. ಆದರೆ, ಕಾರಿನೊಳಗಿದ್ದ ಮುಖಂಡರು, ಕಾರಿನೊಳಗೆ ಸಿಲುಕೊಂಡು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಒಕ್ಕಲಿಗರ ಸಂಘದ ಚುನಾವಣೆ: ಆಮಿಷ ಒಡ್ಡಿ ಮತಬೇಡುವವರನ್ನು ಬೆಂಬಲಿಸಬೇಡಿ | ಯುವ ಮುಖಂಡ ಸಚಿನ್ ಸರಗೂರು

ವಿವಾದಕ್ಕೆ ಕಾರಣವಾದ ‘ಗರುಡ ಗಮನ ವೃಷಭ ವಾಹನ’ ಚಿತ್ರ | ಕೊಲೆ ಮಾಡಿ ಸಂಭ್ರಮಿಸುವ ದೃಶ್ಯಕ್ಕೆ ಮಾದಪ್ಪನ ಹಾಡು

‘ಫ್ಯಾಶಿಸ್ಟರಿಂದ ಕರ್ನಾಟಕ ರಕ್ಷಿಸೋಣ’ | ಡಿಸೆಂಬರ್ 3ರಂದು ಬೃಹತ್ ಜಾಗೃತಿ ಅಭಿಯಾನ

ಗಲ್ಫ್ ನಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ: ದೃಢಪಡಿಸಿದ ಸೌದಿ ಅರೇಬಿಯಾ

1ನೇ ತರಗತಿಯ ಬಾಲಕಿಗೆ ತಂದೆಯಿಂದಲೇ ಲೈಂಗಿಕ ಕಿರುಕುಳ!

ಕ್ಲಾಸ್ ರೂಮ್ ಗೆ ನುಗ್ಗಿ ಗುಂಡಿನ ಮಳೆ ಸುರಿಸಿದ ಹೈಸ್ಕೂಲ್ ವಿದ್ಯಾರ್ಥಿ: 3 ಮಂದಿ ಸಾವು, 6 ಜನರಿಗೆ ಗಾಯ

ಇತ್ತೀಚಿನ ಸುದ್ದಿ