ಇಬ್ಬರು ವಕೀಲರಿಗೆ 2 ತಿಂಗಳು ಜೈಲು ಶಿಕ್ಷೆ ನೀಡಿದ ಹೈಕೋರ್ಟ್‌ - Mahanayaka
1:18 AM Saturday 18 - October 2025

ಇಬ್ಬರು ವಕೀಲರಿಗೆ 2 ತಿಂಗಳು ಜೈಲು ಶಿಕ್ಷೆ ನೀಡಿದ ಹೈಕೋರ್ಟ್‌

judgement
16/01/2022

ಬೆಂಗಳೂರು: ಇಬ್ಬರು ವಕೀಲರಿಗೆ ಹೈಕೋರ್ಟ್ 2 ತಿಂಗಳ ಜೈಲು ಶಿಕ್ಷೆ ಮತ್ತು ತಲಾ 2 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.


Provided by

ವಿಪ್ರೊ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ ಜಿ ಮತ್ತು ಅವರ ಟ್ರಸ್ಟ್‌ ವಿರುದ್ಧ ತನಿಖೆ ನಡೆಸುವಂತೆ ಕೋರಿ ಹಲವು ಸುಳ್ಳು ಮೊಕದ್ದಮೆಗಳನ್ನು ಚೆನ್ನೈ ಮೂಲದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಇಂಡಿಯಾ ಅವೇಕ್ ಫಾರ್ ಟ್ರಾನ್ಸಪರೆನ್ಸಿ ದಾಖಲು ಮಾಡಿತ್ತು.

ಈ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದ ಚೆನ್ನೈನ ವಕೀಲರಾದ ಆರ್‌. ಸುಬ್ರಮಣಿಯನ್ ಮತ್ತು ಪಿ. ಸದಾನಂದಗೆ ಕರ್ನಾಟಕ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.

ಶುಕ್ರವಾರ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ಕೆ. ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ವಕೀಲರು ದಂಡ ಪಾವತಿ ಮಾಡಲು ವಿಫಲವಾದರೆ ಪುನಃ ಒಂದು ತಿಂಗಳು ಜೈಲು ಶಿಕ್ಷೆ ಮುಂದುವರಿಸಬೇಕು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಜೆಪಿ ಏನು ಮಾಡಿದೆ ಎಂದು ಜನರಿಗೆ ಗೊತ್ತಿದೆ: ಸಿಎಂ ಯೋಗಿ ಆದಿತ್ಯನಾಥ್‌

ಚಲಿಸುತ್ತಿದ್ದ ಬಸ್ಸಿನಲ್ಲೇ  ಮೂರ್ಛೆ ಹೋದ ಚಾಲಕ: ಜನರ ಪ್ರಾಣ ಉಳಿಸಿದ ಮಹಿಳೆ

100 ಐಶಾರಾಮಿ ಕಾರುಗಳನ್ನು ಕದ್ದಿದ್ದ ಕಳ್ಳ ಕೊನೆಗೂ ಸಿಕ್ಕಿ ಬಿದ್ದ!

ಇನ್ಮುಂದೆ ಜ.26ರ ಬದಲಿಗೆ ಜ.23ರಿಂದ ಗಣರಾಜ್ಯೋತ್ಸವ ಆಚರಣೆ

ಕೇಂದ್ರ ಗಣರಾಜ್ಯೋತ್ಸವ ಸಮಿತಿಯಿಂದ ನಾರಾಯಣ ಗುರುಗಳ ಚಿತ್ರದ ಸ್ತಬ್ಧಚಿತ್ರ ತಿರಸ್ಕಾರ: ಎಚ್‌ಡಿಕೆ ಆಕ್ರೋಶ

ಇತ್ತೀಚಿನ ಸುದ್ದಿ