ರೇವ್ ಪಾರ್ಟಿ ಪ್ರಕರಣ: ಯೂಟ್ಯೂಬರ್ ಎಲ್ವಿಶ್ ಗೆ ಇಡಿ ಸಮನ್ಸ್ - Mahanayaka
7:11 AM Thursday 16 - October 2025

ರೇವ್ ಪಾರ್ಟಿ ಪ್ರಕರಣ: ಯೂಟ್ಯೂಬರ್ ಎಲ್ವಿಶ್ ಗೆ ಇಡಿ ಸಮನ್ಸ್

10/07/2024

ಜುಲೈ 23 ರಂದು ಲಕ್ನೋದಲ್ಲಿ ಹಾಜರಾಗುವಂತೆ ಯೂಟ್ಯೂಬರ್ ಎಲ್ವಿಶ್ ಯಾದವ್‌ಗೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ. ಈ ವಿಚಾರಣೆಯು ಹಾವಿನ ವಿಷ-ರೇವ್ ಪಾರ್ಟಿ ಘಟನೆಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದೆ. ಈ ಪ್ರಕರಣವನ್ನು ಮೂಲತಃ ಗೌತಮ್ ಬುದ್ಧ ನಗರ ಪೊಲೀಸರು ದಾಖಲಿಸಿದ್ದಾರೆ ಎಂದು ಹಿರಿಯ ಇಡಿ ಅಧಿಕಾರಿಗಳು ತಿಳಿಸಿದ್ದಾರೆ.


Provided by

ಈ ವರ್ಷದ ಮೇ ತಿಂಗಳಲ್ಲಿ ಹಾವಿನ ವಿಷ ಹೊಂದಿದ ಘಟನೆಗೆ ಸಂಬಂಧಿಸಿದಂತೆ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಇಡಿ ಪ್ರಕರಣ ದಾಖಲಿಸಿದೆ. ಯಾದವ್ ಅವರನ್ನು ಆರಂಭದಲ್ಲಿ ಮಾರ್ಚ್ 17 ರಂದು ಬಂಧಿಸಲಾಗಿತ್ತು. 14 ದಿನಗಳ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು. ಐದು ದಿನಗಳ ನಂತರ ಸ್ಥಳೀಯ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ