ಇದು ನನ್ನ ಕೊನೆಯ ಮೆಸೇಜ್ ಆಗಿರಬಹುದು, ಎಂದು ಹೇಳಿ ನೇಣಿಗೆ ಕೊರಳೊಡ್ಡಿದ ಮಹಿಳೆ | ಪತಿಯ ಧನದಾಹಕ್ಕೆ ಪತ್ನಿ ಬಲಿ!
ಕೊಲ್ಲಂ: ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ 24 ವರ್ಷ ವಯಸ್ಸಿನ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ ಕಿರಣ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ವರದಕ್ಷಿಣೆ ನೀಡುವಂತೆ ತನಗೆ ಕಿರಣ್ ಕುಮಾರ್ ಕಿರುಕುಳ ನೀಡುತ್ತಿದ್ದಾನೆ ಎಂದು ವಿಸ್ಮಯ ಸಹೋದರ ಸಂಬಂಧಿಗೆ ಸಂದೇಶ ರವಾನೆ ಮಾಡಿದ್ದಳು. ಅದರ ಫೇಸ್ ಬುಕ್ ಚಾಟ್ ಕೂಡ ಇದೀಗ ವೈರಲ್ ಆಗಿದೆ.
2020ರಲ್ಲಿ ಮೋಟಾರು ವಾಹನ ವಿಭಾಗದ ಅಧಿಕಾರಿಯಾಗಿದ್ದ ಎಸ್.ಕಿರಣ್ ಕುಮಾರ್ ಜೊತೆಗೆ ವಿಸ್ಮಯ ವಿವಾಹವಾಗಿದ್ದರು. ವಿವಾಹದ ಸಂದರ್ಭದಲ್ಲಿ ಕುಟುಂಬಸ್ಥರು 1 ಎಕರೆ ಜಮೀನು ಹಾಗೂ ಕಾರು ವರದಕ್ಷಿಣೆ ರೂಪದಲ್ಲಿ ಕಿರಣ್ ಕುಮಾರ್ ಗೆ ನೀಡಲಾಗಿತ್ತು. ಆದರೆ, ಇದರಿಂದ ತೃಪ್ತನಾಗದ ಕಿರಣ್, ವರದಕ್ಷಿಣೆ ತರುವಂತೆ ಪತಿಗೆ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ.
ಇನ್ನೂ ಈ ಘಟನೆಯಲ್ಲಿ ಗಂಡನ ಮನೆಯವರ ಕೈವಾಡ ಇದೆ ಎಂದು ವಿಸ್ಮಯ ತನ್ನ ಸಾವಿಗೂ ಮೊದಲು ತಮ್ಮ ಸಹೋದರ ಸಂಬಂಧಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಾಳೆ. ಈ ಸಂದೇಶದಲ್ಲಿ ಇದು ನನ್ನ ಕೊನೆಯ ಸಂದೇಶ ಆಗಿರಲೂ ಬಹುದು ಎಂದು ಆಕೆ ಆರೋಪಿಸಿದ್ದಾಳೆ.




























