ಪತ್ರಕರ್ತರಿಗಾಗಿ ಈದುಲ್ ಫಿತರ್ ಪ್ರಯುಕ್ತ ಸಹಭೋಜನ: ಸನ್ಮಾರ್ಗ ಪತ್ರಿಕೆಯ ನೇತೃತ್ವದಲ್ಲಿ ಕಾರ್ಯಕ್ರಮ - Mahanayaka

ಪತ್ರಕರ್ತರಿಗಾಗಿ ಈದುಲ್ ಫಿತರ್ ಪ್ರಯುಕ್ತ ಸಹಭೋಜನ: ಸನ್ಮಾರ್ಗ ಪತ್ರಿಕೆಯ ನೇತೃತ್ವದಲ್ಲಿ ಕಾರ್ಯಕ್ರಮ

eid
05/05/2023

ಮಂಗಳೂರು ಹಳೇ ಬಂದರು ಪ್ರದೇಶದಲ್ಲಿರುವ ಹಿದಾಯತ್ ಸೆಂಟರ್‌ ನಲ್ಲಿ ಮಂಗಳೂರು ನಗರದ ಪತ್ರಕರ್ತರಿಗಾಗಿ ಈದುಲ್ ಫಿತರ್ ಪ್ರಯುಕ್ತ ಸಹಭೋಜನವನ್ನು ಸನ್ಮಾರ್ಗ ಪತ್ರಿಕೆಯ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಇಂತಹ ಕಾರ್ಯಕ್ರಮ ಮಾಡುವ ಮೂಲಕ ಒಟ್ಟಾಗಿ ಜೀವಿಸುವ ಸುಖದ ಗುಟ್ಟು ರಟ್ಟು ಮಾಡಿದರೆ ಸೊಗಸು ಅಂದರು.

ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಮಾತನಾಡಿ, ಒಬ್ಬರಿಗೊಬ್ಬರು ನೋವು ಮತ್ತು  ನಲಿವು ಫೀಲ್ ಮಾಡಿದರೆ ಹೊಡಿಬಡಿ,ಅವಹೇಳನ ಮಾಡಲು ಯಾರೂ ಮುಂದೆ ಬರುವುದಿಲ್ಲ. ಅವರವರ ಪರಿಧಿಯಲ್ಲಿ ನೆಮ್ಮದಿಯ ಜೀವನ ಕಂಡುಕೊಳ್ಳಬಹುದು ಎಂದರು.

ವಾರ್ತಾ ಭಾರತಿಯ ಬ್ಯೂರೋ ಮುಖ್ಯಸ್ಥ ಪುಷ್ಪರಾಜ್ ಮಾತನಾಡಿ, ಪತ್ರಿಕೆಯ ಈ ಎಲ್ಲಾ ಸಹೋದ್ಯೋಗಿಗಳು ಜತೆ ಸೇರಿ ಭೋಜನ ಸ್ವೀಕರಿಸುವುದು ಒಂದು ಮಾದರಿ ಸಹಬಾಳ್ವೆ ಎಂದರು.

eid

ಪಿಂಗಾರ‌ ಪತ್ರಿಕೆಯ ಸಂಪಾದಕ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, ಧರ್ಮಗಳು ಏಷ್ಯಾದ ಕೊಡುಗೆ. ತಿರುಳು ಏಕದೇವನ ಬಗ್ಗೆ ಮಾತ್ರ. ಆಚರಣೆಗಳಲ್ಲಿ ಭಿನ್ನತೆ ಇದೆ. ನಾವು ಒಬ್ಬೊಬ್ಬರೇ ನಡೆದರೆ ವೇಗವಾಗಿ ನಡೆಯಬಹುದು. ಆದರೆ ಜೊತೆಯಲ್ಲಿ ನಡೆದರೆ ಬಹಳ ದೂರದವರೆಗೆ ಸುಖ ದುಃಖ ಹಂಚಿಕೊಂಡು ನಡೆಯಬಹುದು ಎಂದರು.

ಸನ್ಮಾರ್ಗ ಡಿಜಿಟಲ್ ವಾಹಿನಿಯ ಸುದ್ದಿವಾಚಕಿ ಆದ ಪ್ರಿಯಾ ಸುದೇಶ್ ಮಾತನಾಡಿ, ಕೆಲಸದ ಭದ್ರತೆ ಮತ್ತು ತೃಪ್ತಿಯ ಜೀವನ ನನ್ನದು ಎಂದರು.

ಜಮಾಅತೆ ಇಸ್ಲಾಮಿ ಹಿಂದ್‌ ಮಂಗಳೂರು ನಗರ ಅಧ್ಯಕ್ಷ ಕೆ.ಎಂ.ಆಶ್ರಫ್ ಅವರು ಅಧ್ಯಕ್ಷೀಯ ಮಾತುಗಳನ್ನಾಡಿ ಈದುಲ್ ಫಿತ್ರ್ ಮಹತ್ವದ ಬಗ್ಗೆ ಮಾತನಾಡಿದರು.

ಸನ್ಮಾರ್ಗ ಪತ್ರಿಕೆಯ ಸಂಪಾದಕ ಎ.ಕೆ.ಕುಕ್ಕಿಲ ಸ್ವಾಗತಿಸಿದರು. ಶೌಕತ್ ಆಲಿ ನಿರೂಪಿಸಿ‌, ಸನ್ಮಾರ್ಗದ ಪ್ರಬಂಧಕರಾದ‌ ಮೊಹ್ಸಿನ್ ವಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ