ದಯಾಮರಣ ನೀಡುವಂತೆ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿ ವೃದ್ಧ ದಂಪತಿ!: ಮೂಡಿಗೆರೆಯಲ್ಲೊಂದು ಕರುಣಾಜನಕ ಸ್ಟೋರಿ

ಚಿಕ್ಕಮಗಳೂರು : ಸರ್ಫೇಸಿ ಕಾಯ್ದೆಯಡಿ ಕಾಫಿತೋಟ ಹರಾಜು ಮಾಡಿರುವುದರ ವಿರುದ್ಧ ನೊಂದ ವಯೋವೃದ್ಧ ದಂಪತಿ ರಾಷ್ಟ್ರತಿಗೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ.
ವಿಜಯ್ ಹಾಗೂ ಪಾರ್ವತಿ ದಂಪತಿ ದಯಾಮರಣ ಕೋರಿ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ಜಮೀನು ಕೊಡಿ ದುಡಿದು ಸಾಲ ತೀರಿಸ್ತೇವೆ, ಇಲ್ಲಾ ದಯಾ ಮರಣ ಕರುಣಿಸಿ ಎಂದು ವೃದ್ಧ ದಂಪತಿ ರಾಷ್ಟ್ರಪತಿಗೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿಜಯ್ ಹೆಸರಲ್ಲಿ 4, ಪತ್ನಿ ಹೆಸರಲ್ಲಿ 3 ಎಕರೆ ಜಮೀನು ಹೊಂದಿದ್ದ ದಂಪತಿ ಇರುವ ಜಮೀನು ಮೇಲೆ ಮೂಡಿಗೆರೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿಂದ ಅಂದಾಜು 30 ಲಕ್ಷದಷ್ಟು ಸಾಲ ಪಡೆದಿದ್ದಾರೆ.
ಕೊರೋನಾ, ಕಾಡು ಪ್ರಾಣಿಗಳ ಉಪಟಳದಿಂದ ಕೃಷಿ ನಷ್ಟ ಕಂಡಿದ್ದ ದಂಪತಿಗೆ ಲೋನ್ ಮರುಪಾವತಿಗೆ ಕಷ್ಟವಾಗಿತ್ತು. ಲೋನ್ ವಿಳಂಬ ಮಾಡಿದ್ರಿಂದ ಬ್ಯಾಂಕ್ ಹೆಚ್ಚಿನ ಬಡ್ಡಿ ಹಾಕಿದೆ ಎಂದು ದಂಪತಿ ಅಳಲು ತೋಡಿಕೊಂಡಿದ್ದಾರೆ. ಲೋನ್ ಪಾವತಿಗರ ಸಮಯ ನೀಡುತ್ತೇವೆ ಎಂದ ಬ್ಯಾಂಕ್ ಸಿಬ್ಬಂದಿ ಮಾಲೀಕರ ಗಮನಕ್ಕೆ ಬಾರದೇ 5 ಲಕ್ಷ ಪಡೆದು ಭೂಮಿಯನ್ನು ಹರಾಜು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ ಇದ್ದ ಜಮೀನು ಕಳೆದುಕೊಂಡು ವೃದ್ದ ದಂಪತಿ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ. ಇದೀಗ ಜೀವನಕ್ಕೆ ಆಸರೆಯಿಲ್ಲದೇ ದಯಾಮರಣಕ್ಕೆ ಅರ್ಜಿ ಹಾಕಿದ್ದಾರೆ.
ಇರುವ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆ ಮಾಡಲಾಗದೇ ಒದ್ದಾಡುತ್ತಿರುವ ವೃದ್ದ ಜೀವಗಳು, ಇದೀಗ ನ್ಯಾಯ ಕೊಡಿಸಿ ಅಂತ ರಾಷ್ಟಪತಿಯವರ ಮೊರೆ ಹೋಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: