ಎಲೆಕ್ಟ್ರಿಕ್ ಬೈಕ್‌ ನ ಬ್ಯಾಟರಿ ಚಾರ್ಜ್ ಮಾಡುವ ವೇಳೆ ಶಾಕ್ ತಗಲಿ ಯುವತಿ ಸಾವು - Mahanayaka
4:56 PM Wednesday 10 - September 2025

ಎಲೆಕ್ಟ್ರಿಕ್ ಬೈಕ್‌ ನ ಬ್ಯಾಟರಿ ಚಾರ್ಜ್ ಮಾಡುವ ವೇಳೆ ಶಾಕ್ ತಗಲಿ ಯುವತಿ ಸಾವು

shivani
23/05/2022

ಮಹಾರಾಷ್ಟ್ರ: ಮಹಾರಾಷ್ಟ್ರದ ಕರಡ್ ಗ್ರಾಮದಲ್ಲಿ ಎಲೆಕ್ಟ್ರಿಕ್ ಬೈಕ್‌ ನ ಬ್ಯಾಟರಿ ಚಾರ್ಜ್ ಮಾಡುವ ವೇಳೆ ಶಾಕ್ ತಗಲಿ ಯುವತಿ ಸಾವಿಗೀಡಾಗಿರುವ ಘಟನೆ ನಡೆದಿದೆ.


Provided by

​​ ಎಲೆಕ್ಟ್ರಿಕ್ ಬೈಕ್‌ನ ಬ್ಯಾಟರಿಯನ್ನು ಚಾರ್ಜ್ ಮಾಡುತ್ತಿದ್ದ ಯುವತಿಗೆ ಏಕಾಏಕಿ ವಿದ್ಯುತ್​ ಶಾಕ್​ ಹೊಡೆದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗುತ್ತಿದ್ದಂತೆಯೇ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು ಎನ್ನಲಾಗಿದೆ.

ಶಿವಾನಿ ಪಾಟೀಲ್ ಎಂಬ ಯುವತಿ ಸಾವಿಗೀಡಾದ ಯುವತಿಯಾಗಿದ್ದು, ಮಧ್ಯಾಹ್ನದ ವೇಳೆಯಲ್ಲಿ ಈ ಘಟನೆ ನಡೆದಿದೆ. ಘಟನೆಯ ಬಳಿಕ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನ ಕಂಪೆನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ ನಡೆಯಿತು.

ಎಲೆಕ್ಟ್ರಿಕ್ ವಾಹನಗಳಿಂದ ನಡೆಯುತ್ತಿರುವ ದುರಂತ ಪ್ರಕರಣಗಳ ವಿರುದ್ಧ ಈಗಾಗಲೇ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ. ಆದರೂ ಎಲೆಕ್ಟ್ರಿಕ್ ವಾಹನದಿಂದ ದುರಂತಗಳು ನಡೆಯುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಎಸ್ ಡಿಎಂ ಕಾಲೇಜಿನ ಕಾರ್ಯದರ್ಶಿ ಡಾ.ಬಿ.ಯಶೋವರ್ಮಾ ನಿಧನ

ಇವ್ರು ನೋಡಿದ್ರಾ? ಸುಮ್ ಸುಮ್ನೇ ಕ್ರಿಯೇಟ್ ಮಾಡ್ತಾರೆ: ವಿಪಕ್ಷಗಳ ವಿರುದ್ಧ ಈಶ್ವರಪ್ಪ ಕಿಡಿ

ಅಪಘಾತದಲ್ಲಿ ಮೃತಪಟ್ಟ 9 ಮಂದಿಯ ಕುಟುಂಬಸ್ಥರಿಗೆ 5 ಲಕ್ಷ ರೂ ಪರಿಹಾರ: ಬೊಮ್ಮಾಯಿ

ಸ್ವಿಚ್ ಬೋರ್ಡ್ ಗೆ ಕೈ ಹಾಕಿದ ಮಗುವಿನ ದಾರುಣ ಸಾವು!

ತಂಪು ಪಾನೀಯದ ಮುಚ್ಚಳ ಗಂಟಲಲ್ಲಿ ಸಿಕ್ಕಿಕೊಂಡು ಪಿಯುಸಿ ವಿದ್ಯಾರ್ಥಿ ಸಾವು

ಇತ್ತೀಚಿನ ಸುದ್ದಿ