ಕುಂದೂರು ಸಮೀಪ ಸೆರೆಯಾದ ಕಾಡಾನೆ: ಕಿಲ್ಲರ್ ಸಲಗ ಬಿಟ್ಟು ಸೆರೆಯಾಯ್ತಾ ಬೇರೆ ಸಲಗ...? - Mahanayaka
1:36 PM Wednesday 22 - October 2025

ಕುಂದೂರು ಸಮೀಪ ಸೆರೆಯಾದ ಕಾಡಾನೆ: ಕಿಲ್ಲರ್ ಸಲಗ ಬಿಟ್ಟು ಸೆರೆಯಾಯ್ತಾ ಬೇರೆ ಸಲಗ…?

kunduru
16/11/2023

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನಲ್ಲಿ ಆನೆ ದಾಳಿಯಿಂದ ನಾಗರೀಕರು ಸಾವನ್ನಪ್ಪಿರುವ ಪ್ರಕರಣದ ಬಳಿಕ ಆನೆ ಸೆರೆಗೆ ಸಿಎಂ ಸೂಚನೆ ನೀಡಿದ್ದರು. ಇದೀಗ ತಡರಾತ್ರಿವರೆಗೂ ನಡೆದ ಕಾಡಾನೆ ಸೆರೆ ಕಾರ್ಯಾಚರಣೆಯ ಬಳಿಕ ಆನೆಯೊಂದನ್ನು ಸೆರೆ ಹಿಡಿಯಲಾಗಿದೆ.

ಕುಂದೂರು ಸಮೀಪ ಸೆರೆಯಾದ ಕಾಡಾನೆ ಸೆರೆಯಾಗಿದೆ. ಅರವಳಿಕೆ ಚುಚ್ಚು ಮದ್ದು ನೀಡಿದ್ದ ಇಲಾಖೆ ಆನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ನಾಗರಿಕರನ್ನು ಬಲಿಪಡೆದ ಆನೆಯನ್ನು ಬಿಟ್ಟು ಬೇರೆಯೊಂದು ಆನೆಯನ್ನು ಹಿಡಿಯಲಾಗಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.  ನಿನ್ನೆ ಮಧ್ಯಾಹ್ನ ಕುಂದೂರು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ಬೆನ್ನು ಹತ್ತಿದ್ದ ಸಿಬ್ಬಂದಿ, ನಿರಂತರ ಕಾರ್ಯಾಚರಣೆ ಬಳಿಕ ತಡರಾತ್ರಿ ಒಂಟಿ ಸಲಗವನ್ನು ಹಿಡಿದಿದ್ದಾರೆ.

ಆದರೆ, ಇಬ್ಬರನ್ನ ಕೊಂದ ಒಂಟಿ ಸಲಗ ಬಿಟ್ಟು ಬೇರೆ ಆನೆ ಸೆರೆ ಹಿಡಿಯಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.  ಸೆರೆಯಾದ ಕಾಡಾನೆ ಯಾವುದು ಅಂತ ಅರಣ್ಯ ಇಲಾಖೆ ಸ್ಪಷ್ಟನೆ ನೀಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಇನ್ನೂ ಕೂಡ ಅರಣ್ಯ ಇಲಾಖೆ ಕಾರ್ಯಚರಣೆ ಮುಂದುವರೆಸಲಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ