ಮಲೆನಾಡಲ್ಲಿ ಮಿತಿ ಮೀರಿದ ಆನೆ ಹಾವಳಿ, ಭತ್ತದ ಗದ್ದೆಗಳು ನಾಶ, ಅಳಿದುಳಿದ ಗದ್ದೆಗಳು ಆನೆ ಕಾಲಿಗೆ ಬಲಿ…!

ಮೂಡಿಗೆರೆ: ಮಲೆನಾಡಲ್ಲಿ ದಿನದಿಂದ ದಿನಕ್ಕೆ ಆನೆ ಹಾವಳಿ ಮಿತಿ ಮೀರುತ್ತಿದ್ದು ಒಂದೆಡೆ ಕಾಫಿ-ಮೆಣಸು-ಬಾಳೆ ನಾಶವಾಗುತ್ತಿದ್ದರೆ ಮತ್ತೊಂದೆಡೆ ಭತ್ತದ ಗದ್ದೆಗಳು ಆನೆ ಕಾಲಿಗೆ ಬಲಿಯಾಗುತ್ತಿದ್ದು ರೈತರು ಭತ್ತ ಬೆಳೆಯೋದನ್ನೇ ಕೈಬಿಟ್ಟಿದ್ದಾರೆ.
ಮೂಡಿಗೆರೆ ತಾಲೂಕಿನ ಯತೇಚ್ಛವಾಗಿ ಭತ್ತ ಬೆಳೆಯುತ್ತಿದ್ದರು. ಮಳೆ ಕಾರಣಕ್ಕೆ ಒಂದಷ್ಟು ಜನ ಗದ್ದೆಯನ್ನ ತೋಟ ಮಾಡಿದ್ದಾರೆ. ಮತ್ತೊಂದಿಷ್ಟು ಜನ ಲಾಭ–ನಷ್ಟದ ಕಾರಣಕ್ಕೆ ಪಾಳುಬಿಟ್ಟು ದುಡಿಮೆಯ ದಾರಿ ಹುಡುಕಿ ಊರು ಬಿಟ್ಟಿದ್ದಾರೆ. ಆದರೆ, ಬೆರಳೆಣಿಕೆಯಷ್ಟು ಜನ ಇಂದಿಗೂ ಭತ್ತ ಬೆಳೆಯುತ್ತಿದ್ದಾರೆ. ಆದರೆ, ಮಲೆನಾಡಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಮೀತಿ ಮೀರಿರುವ ಕಾಡಾನೆಗಳ ಹಾವಳಿಗೆ ಅಳಿದುಳಿದಿರೋ ಭತ್ತದ ಗದ್ದೆಗಳು ನಾಶವಾಗುತ್ತಿವೆ.
ಮೂಡಿಗೆರೆ ತಾಲೂಕಿನ ದುಂಡುಗ ಗ್ರಾಮದಲ್ಲಿ ಸಂತೋಷ್ ಎಂಬುವರ ಭತ್ತದ ಗದ್ದೆಯಲ್ಲಿ ಮೂರು ಕಾಡಾನೆಗಳು ಮನಸ್ಸೋ ಇಚ್ಛೆ ದಾಂಧಲೆ ಮಾಡಿದ್ದು ನಾಟಿಗೆ ಸಿದ್ಧವಾಗಿದ್ದ ಭತ್ತದ ಮಡಿಗಳು ಸಂಪೂರ್ಣ ನಾಶವಾಗಿವೆ.
ಮತ್ತೆ ಸಸಿ ಮಾಡಿ ನಾಟಿ ಮಾಡುವಷ್ಟರಲ್ಲಿ ಭತ್ತ ಬೆಳೆಯೋ ಅವಧಿಯೇ ಮುಗಿದು ಹೋಗುತ್ತೆ. ಈ ರೀತಿ ಕಾಡು ಪ್ರಾಣಿಗಳ ದಾಂಧಲೆಯಿಂದಲೇ ಮಲೆನಾಡಲ್ಲಿ ಭತ್ತದ ಗದ್ದೆಗಳು ತೋಟಗಳು, ಸೈಟ್ ಗಳಾಗಿ ಮಾರ್ಪಟ್ಟಿವೆ. ಅಳಿದುಳಿದಿರೋ ಗದ್ದೆಗಳು ಕೂಡ ಆನೆ ಹಾವಳಿಗೆ ಬಲಿಯಾಗ್ತಿದ್ದು ಮಲೆನಾಡಿಗರು ಭತ್ತದತ್ತ ವಿಮುಖರಾಗಿದ್ದಾರೆ.
ಅತ್ತ ತೋಟ ಮಾಡಿದರೂ ನೆಮ್ಮದಿಯಿಲ್ಲ. ಇತ್ತ ಭತ್ತ ಬೆಳೆದಿರೋ ನೆಮ್ಮದಿ ಇಲ್ಲದಂತಾಗಿದೆ. ಹಾಗಾಗಿ, ಮೂಡಿಗೆರೆ ತಾಲೂಕಿನ ದಶಧಿಕ್ಕುಗಳಲ್ಲೂ ಆನೆ ಹಾವಳಿ ಹೇಳ ತೀರದ್ದಾಗಿದೆ. ಕೆಲವಡೆ ಹಿಂಡು–ಹಿಂಡು ಕಾಡಾನೆಗಳು ದಾಂಧಲೆ ಮಾಡುತ್ತಿದ್ದರೆ, ಮತ್ತಲವೆಡೆ ಒಂಟಿ ಸಲಗಗಲೇ ಗುಂಪಿಗಿಂತ ಹೆಚ್ಚು ದಾಂಧಲೆ ಮಾಡುತ್ತಿವೆ. ಹಾಗಾಗಿ, ಮಲೆನಾಡಿಗರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಿಗಳು ಕೂಡಲೇ ಆನೆ ಹಾವಳಿಗೆ ಸಂಪೂರ್ಣ ಬ್ರೇಕ್ ಹಾಕಬೇಕು. ಬೆಳೆ ಹಾಳಾದ ಮೇಲೆ ನಮ್ಮ ಲಕ್ಷ ನಷ್ಟಕ್ಕೆ ನಿಮ್ಮ ಸಾವಿರ ಪರಿಹಾರ ಬೇಡ. ಆನೆ ಹಾವಳಿಗೆ ಶಾಶ್ವತವಾಗಿ ಬ್ರೇಕ್ ಹಾಕಿದರೆ ಸಾಕು. ಮೊದಲು ಅಷ್ಟು ಮಾಡಿ ಎಂದು ಮಲೆನಾಡಿಗರು ಅರಣ್ಯ ಇಲಾಖೆಗೆ ತಾಕೀತು ಮಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: