ರಸ್ತೆ ಮಧ್ಯೆ ಇದ್ದಕ್ಕಿದ್ದಂತೆ ಆನೆ ಪ್ರತ್ಯಕ್ಷ: ಕಾರು ಪ್ರಯಾಣಿಕರು ಕಕ್ಕಾಬಿಕ್ಕಿ - Mahanayaka

ರಸ್ತೆ ಮಧ್ಯೆ ಇದ್ದಕ್ಕಿದ್ದಂತೆ ಆನೆ ಪ್ರತ್ಯಕ್ಷ: ಕಾರು ಪ್ರಯಾಣಿಕರು ಕಕ್ಕಾಬಿಕ್ಕಿ

27/05/2024


Provided by

ಮೂನಾರ್ ಇಡುಕ್ಕಿಯ ನಲ್ಲತನ್ನಿ ಎಂಬಲ್ಲಿ ರಸ್ತೆ ಮಧ್ಯೆ ದಿಢೀರನೇ ಭಾರೀ ಗಾತ್ರದ ಆನೆ ಪ್ರತ್ಯಕ್ಷವಾಗಿ ಕಾರು ಪ್ರಯಾಣಿಕರನ್ನು ಗಲಿಬಿಲಿಗೊಳಿಸಿದ ವಿಡಿಯೋ ವೈರಲ್ ಆಗಿದೆ. ಆನೆ ಹತ್ತಿರ ಬಂದಂತೆಯೇ ಕಾರಿನಲ್ಲಿ ಇದ್ದವರು ಇಳಿದು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಎರಡು ಕಾರುಗಳಲ್ಲಿ ಕಲ್ಲಾಟಿ ಎಂಬ ಪ್ರದೇಶಕ್ಕೆ ಗುಂಪು ಪ್ರಯಾಣ ಬೆಳೆಸುತ್ತಿತ್ತು. ಈ ನಡುವೆ ರಸ್ತೆ ಮಧ್ಯೆ ಭಾರಿ ಗಾತ್ರದ ಆನೆ ಪ್ರತ್ಯಕ್ಷವಾಗಿದೆ. ಆನೆ ಹತ್ತಿರ ಬರುತ್ತಿದ್ದಂತೆಯೇ ಇವರೆಲ್ಲ ಕಾರಿನಿಂದ ಇಳಿದು ಓಡಿ ಹೋಗಿದ್ದಾರೆ. ಇವರು ಬೊಬ್ಬೆ ಹಾಕಿ ಆನೆಯನ್ನು ಓಡಿಸಲು ಪ್ರಯತ್ನಿಸಿದರೂ ಅದು ಕ್ಯಾರೆ ಮಾಡಲಿಲ್ಲ. ಕಾರುಗಳಿಗೆ ಸಣ್ಣಮಟ್ಟಿನ ತೊಂದರೆಯಾಗಿದ್ದನ್ನು ಬಿಟ್ಟರೆ ಬೇರೇನು ಆಗಿಲ್ಲ. ಬೊಬ್ಬೆ ಹಾಕಿ ಆನೆಯನ್ನು ಓಡಿಸಲು ಗುಂಪು ಪ್ರಯತ್ನಿಸಿದುದರಿಂದ ಆನೆ ಸಿಟ್ಟಾಯ್ತು. ಗುಂಪನ್ನು ಒಂದಷ್ಟು ದೂರ ಓಡಿಸಿ ಬಂದ ಆನೆ ಬಳಿಕ ರಸ್ತೆಯ ಬದಿಗೆ ಸರಿದು ಕಾಡಿನಲ್ಲಿ ಮಾಯವಾಯಿತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ