ಟ್ರಂಪ್ ಚುನಾವಣಾ ಖರ್ಚಿಗಾಗಿ 75 ಮಿಲಿಯನ್ ಡಾಲರ್ ಮೊತ್ತವನ್ನು ನೀಡಿದ ಇಲೋನ್ ಮಸ್ಕ್ - Mahanayaka
6:43 PM Thursday 16 - October 2025

ಟ್ರಂಪ್ ಚುನಾವಣಾ ಖರ್ಚಿಗಾಗಿ 75 ಮಿಲಿಯನ್ ಡಾಲರ್ ಮೊತ್ತವನ್ನು ನೀಡಿದ ಇಲೋನ್ ಮಸ್ಕ್

17/10/2024

ಜಗತ್ತಿನ ನಂಬರ್ ಒನ್ ಶ್ರೀಮಂತರಾಗಿರುವ ಇಲೋನ್ ಮಸ್ಕ್ ಅವರು ಅಮೇರಿಕಾದ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಖರ್ಚಿಗಾಗಿ 75 ಮಿಲಿಯನ್ ಡಾಲರ್ ಮೊತ್ತವನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಇವರು ಎಕ್ಸ್ ಜಾಲತಾಣದ ಮಾಲೀಕರೂ ಆಗಿದ್ದಾರೆ.


Provided by

ಟ್ರಂಪ್ ಅವರ ಚುನಾವಣಾ ಭಾಷಣದ ವೇದಿಕೆಯಲ್ಲಿ ಎಲೋನ್ ಮಸ್ಕ್ ಅವರು ಈಗಾಗಲೇ ಕಾಣಿಸಿಕೊಂಡಿದ್ದಾರೆ ಮತ್ತು ಅವರ ಎದುರಾಳಿ ಕಮಲಾ ಹ್ಯಾರಿಸ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಬಾರಿಗೂ ಕಾಲೆಳೆದಿದ್ದಾರೆ. ಒಂದು ವೇಳೆ ಟ್ರಾಂಪ್ ಅಧಿಕಾರಕ್ಕೆ ಬಂದರೆ ಎಲೋನ್ ಮಸ್ಕ್ ಅವರು ಕ್ಯಾಬಿನೆಟ್ ನಲ್ಲಿ ಪ್ರಮುಖ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ. ಈವರೆಗೆ ನಡೆದಿರುವ ಸಮೀಕ್ಷೆಯ ಪ್ರಕಾರ ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ಓರ್ವ ಮಹಿಳೆ ಆಯ್ಕೆಯಾಗುತ್ತಾರೆ ಎಂದು ಹೇಳಲಾಗಿದೆ.

ಕಮಲ ಹಾರೀಸ್ ಅವರಿಗೆ ಅಮೆರಿಕದ ಅಧ್ಯಕ್ಷರಾಗುವ ಎಲ್ಲಾ ಅವಕಾಶಗಳು ಇವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇದೆ ವೇಳೆ ಇಸ್ರೇಲ್ ಪರ ಬ್ಯಾಟಿಂಗ್ ಬೀಸುತ್ತಿರುವ ಟ್ರಂಪ್ ಅವರು ಇರಾನ್ ನ ಅಣುಸ್ಥಾವರದ ಮೇಲೆ ಇಸ್ರೇಲ್ ದಾಳಿ ಮಾಡುವುದಕ್ಕೆ ತನ್ನ ಬೆಂಬಲ ಇದೆ ಎಂದು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ