ಕುಖ್ಯಾತ ಕ್ರಿಮಿನಲ್ ರಶೀದ್ ಕಾಲಿಯಾ ಎನ್ ಕೌಂಟರ್ - Mahanayaka

ಕುಖ್ಯಾತ ಕ್ರಿಮಿನಲ್ ರಶೀದ್ ಕಾಲಿಯಾ ಎನ್ ಕೌಂಟರ್

rasheed kalia
18/11/2023

ಲಕ್ನೋ: ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ(ಎಸ್‌’ಟಿಎಫ್) ಕುಖ್ಯಾತ ಕ್ರಿಮಿನಲ್ ರಶೀದ್ ಕಾಲಿಯಾನನ್ನು ಹತ್ಯೆ ಮಾಡಿದೆ.

ಝಾನ್ಸಿ ಜಿಲ್ಲೆಯಲ್ಲಿ ಶನಿವಾರ ನಡೆದ ಎನ್‌ ಕೌಂಟರ್‌ ನಲ್ಲಿ ರಶೀದ್ ಕಾಲಿಯಾನನ್ನು ಹತ್ಯೆ ಮಾಡಲಾಗಿದೆ.  ರಶೀದ್ ಕಾಲಿಯಾ ಮೇಲೆ 40 ಕೊಲೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಆತನ ತಲೆಗೆ 1.25 ಲಕ್ಷ ರೂ. ಬಹುಮಾನ ಘೋಷಿಸಿದ್ದರು.

ಉತ್ತರ ಪ್ರದೇಶ ಪೊಲೀಸ್ ಮೂಲಗಳ ಪ್ರಕಾರ, ಕಾಲಿಯಾ ಝಾನ್ಸಿ ಜಿಲ್ಲೆಯ ಮೌರಾನಿಪುರದಲ್ಲಿ ಸುಪಾರಿ ಹತ್ಯೆಗಾಗಿ ಆಗಮಿಸಿದ್ದ ವೇಳೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ.

ಮೌರಾನಿಪುರದಲ್ಲಿ ಕಾಲಿಯಾ ಇರುವಿಕೆಯ ಬಗ್ಗೆ ಮಾಹಿತಿ ಪಡೆದು ತಕ್ಷಣ ಸ್ಥಳಕ್ಕೆ ಆಗಮಿಸಿದ ಯುಪಿ ಎಸ್‌ ಟಿಎಫ್ ಗುಂಡಿನ ದಾಳಿ ನಡೆಸಿದೆ.  ಗುಂಡಿನ ಚಕಮಕಿಯಲ್ಲಿ, ಕಾಲಿಯಾ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಕಾಲಿಯಾ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಇತ್ತೀಚಿನ ಸುದ್ದಿ