ಕರುನಾಡಿನಲ್ಲಿ ನಕ್ಸಲ್ ಯುಗಾಂತ್ಯ:  ನಕ್ಸಲ್ ರವೀಂದ್ರ ಶೀಘ್ರವೇ ಮುಖ್ಯವಾಹಿನಿಗೆ - Mahanayaka

ಕರುನಾಡಿನಲ್ಲಿ ನಕ್ಸಲ್ ಯುಗಾಂತ್ಯ:  ನಕ್ಸಲ್ ರವೀಂದ್ರ ಶೀಘ್ರವೇ ಮುಖ್ಯವಾಹಿನಿಗೆ

raveendra
28/01/2025


Provided by

ಚಿಕ್ಕಮಗಳೂರು: ಕಾಫಿನಾಡ ಕಾಡು ನಕ್ಸಲರಿಂದ ಸಂಪೂರ್ಣ ಮುಕ್ತವಾಗಲಿದೆ. 2 ದಶಕಗಳ ನಕ್ಸಲ್ ನಾಯಕತ್ವದ  ರವೀಂದ್ರ ಕೂಡ ಸದ್ಯದಲ್ಲೇ  ಶಸ್ತ್ರಾಸ್ತ್ರ ಹೋರಾಟಕ್ಕೆ ಅಂತ್ಯ ಹಾಡಿ ಸರ್ಕಾರಕ್ಕೆ ಶರಣಾಗಲು ನಿರ್ಧರಿಸುವುದಾಗಿ ತಿಳಿದು ಬಂದಿದೆ.

ಶರಣಾಗತಿಯಾಗಲು ನಕ್ಸಲ್ ನಾಯಕ ರವೀಂದ್ರ ಮುಂದಾಗಿದ್ದಾರೆ ಎನ್ನಲಾಗಿದೆ. ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರನ್ನ ರವೀಂದ್ರ ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ನಕ್ಸಲ್ ರವೀಂದ್ರ ಶರಣಾದರೆ ಕಾಫಿನಾಡ-ಕರುನಾಡು ನಕ್ಸಲರಿಂದ ಫುಲ್ ಫ್ರೀ ಆಗಲಿದೆ. ರಾಜ್ಯ ನಕ್ಸಲ್ ಮುಕ್ತ ರಾಜ್ಯವಾಗಿ ಘೋಷಣೆಯಾಗಲಿದೆ.

ಸದ್ಯದ  ಮಾಹಿತಿಗಳ ಪ್ರಕಾರ, ಇನ್ನೊಂದು ವಾರದೊಳಗೆ ನಕ್ಸಲ್ ರವೀಂದ್ರ ಸರ್ಕಾರಕ್ಕೆ ಶರಣಾಗಲಿದ್ದಾರೆ ಎನ್ನಲಾಗಿದೆ. ರವೀಂದ್ರ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕಾಡಿನಲ್ಲಿ ಉಳಿದುಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಜನವರಿ 8ರಂದು 6 ಜನ ನಕ್ಸಲರು ಶರಣಾಗತಿ ಘೋಷಿಸಿ ಸಿಎಂ ಸಿದ್ದರಾಮಯ್ಯ ಮುಂದೆ ಶರಣಾಗಿದ್ದರು. ಈ ಸಂದರ್ಭದಲ್ಲಿ ರವೀಂದ್ರ ಈ ತಂಡದಲ್ಲಿ ಇಲ್ಲದಿರುವುದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿತ್ತು.  ಇದರ ಬೆನ್ನಲ್ಲೇ ರವೀಂದ್ರ ಕೂಡ ಮುಖ್ಯವಾಹಿನಿಗೆ ಬರಲು ಮುಂದಾಗಿದ್ದಾರೆ ಅಂತ ಹೇಳಲಾಗಿದೆ.

ಕರ್ನಾಟಕದಲ್ಲಿ ಜನರು ನಕ್ಸಲ್ ಹೋರಾಟವನ್ನು ಸಂಪೂರ್ಣವಾಗಿ ತಳ್ಳಿ ಹಾಕುತ್ತಿದ್ದಾರೆ. ನಿರೀಕ್ಷಿತ ಬೆಂಬಲ ಕೂಡ ನಕ್ಸಲರಿಗೆ ಸಿಗುತ್ತಿಲ್ಲ. ಕಾಡಿನಲ್ಲಿ ಬಂದೂಕು ಹಿಡಿದು ಕುಳಿತು ಅದೇನು ಬದಲಾವಣೆ ತರಲು ಸಾಧ್ಯ? ಮುಖ್ಯವಾಹಿನಿಗೆ ಬಂದು ಕಾನೂನಿನ ಪ್ರಕಾರ, ಸಂವಿಧಾನದಡಿಯಲ್ಲಿ ಶಾಂತಿಯುತ ಹೋರಾಟ ಸಾಧ್ಯ ಎನ್ನುವುದನ್ನು ನಕ್ಸಲರು ಮನಗಂಡಿದ್ದಾರೆ ಎನ್ನಲಾಗಿದೆ.

ನಕ್ಸಲರನ್ನು ಮುಖ್ಯವಾಹಿನಿಗೆ ತರಲು  ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ಸಾಕಷ್ಟು ಪರಿಶ್ರಮವಹಿಸಿದ್ದಾರೆ. ಕರ್ನಾಟಕ ನಕ್ಸಲ್ ಮುಕ್ತವಾದರೆ, ಅದರ ಹಿರಿಮೆ ವೇದಿಕೆ ಸದಸ್ಯರಿಗೆ ಸಲ್ಲಬೇಕು ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ.

ಶೃಂಗೇರಿಯ ನಕ್ಸಲ ರವೀಂದ್ರ ಶರಣಾಗತಿಯಾದ್ರೆ  ಹಸಿರ ಕಾಡಲ್ಲಿ ನಕ್ಸಲ್ ಶಸ್ತ್ರಾಸ್ತ್ರ ಹೋರಾಟಕ್ಕೆ ಅಂತ್ಯ ದೊರಕಲಿದೆ. ರವೀಂದ್ರ ಶರಣಾದರೆ, ರಾಜ್ಯ ಸಂಪೂರ್ಣ ನಕ್ಸಲ್ ಮುಕ್ತವಾಗಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ