ಇನ್ನೂ 19 ಸಿಡಿಗಳು ಇವೆ, ಅನುಕೂಲಕ್ಕೆ ತಕ್ಕ ಹಾಗೆ ಅವು ಬಿಡುಗಡೆಯಾಗುತ್ತದೆ | ಮೇಟಿ ವಿಡಿಯೋ ಬಿಡುಗಡೆ ಮಾಡಿದ ವ್ಯಕ್ತಿ ಹೇಳಿಕೆ - Mahanayaka
11:52 PM Wednesday 15 - October 2025

ಇನ್ನೂ 19 ಸಿಡಿಗಳು ಇವೆ, ಅನುಕೂಲಕ್ಕೆ ತಕ್ಕ ಹಾಗೆ ಅವು ಬಿಡುಗಡೆಯಾಗುತ್ತದೆ | ಮೇಟಿ ವಿಡಿಯೋ ಬಿಡುಗಡೆ ಮಾಡಿದ ವ್ಯಕ್ತಿ ಹೇಳಿಕೆ

03/03/2021

ಬಳ್ಳಾರಿ:  ರಮೇಶ್ ಜಾರಕಿಹೊಳಿ ಸಿಡಿ ರಿಲೀಸ್ ವಿಚಾರವಾಗಿ  ಅಂದಿನ ಸಚಿವ ಎಚ್.ವೈ.ಮೇಟಿ ಅವರ ವಿಡಿಯೋ ಬಿಡುಗಡೆ ಮಾಡಿದ ರಾಜಶೇಖರ್ ಮುಲಾಲಿ ಎಂಬ ವ್ಯಕ್ತಿ ಮಾತನಾಡಿದ್ದು, ಈ ವಿಡಿಯೋದ ಮೂಲಕ ರಮೇಶ್ ಜಾರಕಿಹೊಳಿಯ ಮರ್ಯಾದೆ ಕಳೆಯುವ ಹುನ್ನಾರ ಇದೆ ಎಂದು ಹೇಳಿದ್ದಾರಲ್ಲದೇ ಇದರ ಹಿಂದೆ ಕಾಂಗ್ರೆಸ್ ನ ಕೈವಾಡ ಇದೆ ಎಂದು ಹೇಳಿದ್ದಾರೆ.


Provided by

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಈ ಸಿಡಿಯಲ್ಲಿ ವಿಡಿಯೋಗೂ ವಾಯ್ಸ್ ಗೂ ಲಿಂಕ್ ಇಲ್ಲ. ಈ ಸಿಡಿ ಹಳೆಯದ್ದಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಕರಣದ ಬಗ್ಗೆ ಇಲ್ಲಿಯವರೆಗೆ ಸಂತ್ರಸ್ತೆ ದೂರು ದಾಖಲಿಸಿಲ್ಲ,  ಮಹಿಳೆ ನಿಜವಾದ ಸಂತ್ರಸ್ತೆಯಾಗಿದ್ದರೆ, ದೂರು ನೀಡಲಿ. ಭಯ ಇದ್ದರೆ ನನ್ನನ್ನು ಭೇಟಿಯಾಗಲಿ ಎಂದು ಅವರು ಹೇಳಿದ್ದಾರೆ.

ಇನ್ನೂ ವಿಡಿಯೋ ಸಂಬಂಧ ಇನ್ನೊಂದು ಬಾಂಬ್ ಹಾಕಿರುವ ರಾಜಶೇಖರ್, ಕೆಲವರು ಪ್ರಭಾವಿಗಳ ವಿರುದ್ಧ ಸಿಡಿ ಮಾಡುವ ಗ್ಯಾಂಗ್ ಕಟ್ಟಿಕೊಂಡಿದ್ದಾರೆ. ಇದೇ ಕೆಲಸಕ್ಕಾಗಿ  ಒಬ್ಬ ಮಾಜಿ ಮುಖ್ಯಮಂತ್ರಿ ವಯನಾಡಿಗೆ ಆಗಾಗಾ ಹೋಗುತ್ತಿರುತ್ತಾರೆ. ಇನ್ನೂ 19 ಜನರ ಸಿಡಿಗಳು ಇವೆ. ಅವುಗಳನ್ನು ಇಟ್ಟುಕೊಂಡು ಕೆಲವರು ಆಟವಾಡುತ್ತಿದ್ದಾರೆ. ಅವರ ಅನುಕೂಲತೆಗೆ ತಕ್ಕ ಹಾಗೆ ವಿಡಿಯೋಗಳನ್ನು ರಿಲೀಸ್ ಮಾಡಿಸುತ್ತಾರೆ ಎಂದು ಅವರು ಆರೋಪಿಸಿದರು.

whatsapp

ಇತ್ತೀಚಿನ ಸುದ್ದಿ