ಇನ್ನೂ ಆರದ ಗ್ರಾಪಂ ಚುನಾವಣೆ ಬಿಸಿ; ಚುನಾವಣೆ ಗೆದ್ದ ಮಹಿಳೆಯ ಮಗನ ಬರ್ಬರ ಹತ್ಯೆ - Mahanayaka
12:46 PM Wednesday 15 - October 2025

ಇನ್ನೂ ಆರದ ಗ್ರಾಪಂ ಚುನಾವಣೆ ಬಿಸಿ; ಚುನಾವಣೆ ಗೆದ್ದ ಮಹಿಳೆಯ ಮಗನ ಬರ್ಬರ ಹತ್ಯೆ

16/02/2021

ರಾಯಚೂರು:  ಗ್ರಾಮ ಪಂಚಾಯತ್ ಚುನಾವಣೆ ಮುಗಿದು ಫಲಿತಾಂಶ ಬಂದಿದ್ದರೂ ಇನ್ನೂ ಚುನಾವಣೆಯ ಬಿಸಿ ಆರಿಲ್ಲ.  ರಾಯಚೂರಿನ ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದಲ್ಲಿ  ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೋಬ್ಬರನ್ನು ಹತ್ಯೆ ಮಾಡಲಾಗಿದೆ.


Provided by

35 ವರ್ಷದ ಶರಣಬಸವ ಮೃತಪಟ್ಟವರಾಗಿದ್ದು,  ಫೆ.15ರಂದು ರಾತ್ರಿ ಜಗದೀಶ್  ಎಂಬಾತನ ಜೊತೆಗೆ ಮಾರಾಮಾರಿ ನಡೆದಿದ್ದು, ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಶರಣಬಸವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಅವರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಶರಣಬಸವ ಅವರ ತಾಯಿ ಹನುಮಂತಮ್ಮ ಹೊನ್ನಳ್ಳಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇವರ ಪ್ರತಿಸ್ಪರ್ಧಿಯಾಗಿ  ಆರೋಪಿ ಜಗದೀಶನ ತಾಯಿ ಪಾರ್ವತಮ್ಮ ಕಣದಲ್ಲಿದ್ದರು.

ಚುನಾವಣೆಯಲ್ಲಿ ಶರಣಬಸವ ತಾಯಿ ಹನುಮಂತಮ್ಮ  ಗೆಲುವು ಸಾಧಿಸಿದ್ದು, ಪಾರ್ವತಿ ಸೋತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಘರ್ಷಣೆ ನಡೆದಿದ್ದು, ಇದು ಕೊಲೆಯಲ್ಲಿ ಅಂತ್ಯವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಜಗದೀಶ್ ಸೇರಿದಂತೆ 10 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ