ಪ್ರತಿಯೊಬ್ಬರೂ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು : ಶಂಕರಲಿಂಗ ಶಿವಾಚಾರ್ಯ - Mahanayaka

ಪ್ರತಿಯೊಬ್ಬರೂ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು : ಶಂಕರಲಿಂಗ ಶಿವಾಚಾರ್ಯ

Shankaralinga Shivacharya
03/07/2024


Provided by

ಔರಾದ್ : ಮರಗಿಡಗಳು ನಮ್ಮ ಬದುಕಿನ ಅವಿಭಾಜ್ಯ ಅಂಗ. ಪ್ರತಿಯೊಬ್ಬರೂ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕು ಮತ್ತು ಸಸಿಗಳನ್ನು ನೆಟ್ಟು ಹೆಮ್ಮರವಾಗಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕು ಎಂದು ದತ್ತಸಾಯಿ ಶನೇಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಶಂಕರಲಿಂಗ ಶಿವಾಚಾರ್ಯರು ಹೇಳಿದರು. ಪಟ್ಟಣದ ದತ್ತ, ಸಾಯಿ, ಶನೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು. ಮುಂದಿನ ಪೀಳಿಗೆಯ ಬದುಕು ಹಸನಾಗಬೇಕಾದರೆ ಪ್ರತಿಯೊಬ್ಬರೂ ಪರಿಸರ ಸಂರಕ್ಷ ಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಗಿಡ ಮರಗಳನ್ನು ಮಕ್ಕಳಂತೆ ಆರೈಕೆ ಮಾಡಿದಾಗ ಅಪಾರ ಆನಂದ ಸಿಗುತ್ತದೆ. ಅದು ಜೀವ ಜಗತ್ತಿಗೆ ಮನುಷ್ಯನೊಬ್ಬ ಮಾಡಬಹುದಾದ ಮಹತ್ಕಾರ್ಯವೂ ಆಗಿದೆ. ಪರಿಸರ ನಮ್ಮೆಲ್ಲರ ಸೊತ್ತು ಹಾಗೆ ಅದನ್ನು ಜೋಪಾನವಾಗಿ ಕಾಯ್ದು ಕೊಳ್ಳುವುದೂ ನಮ್ಮ ಜವಾಬ್ದಾರಿಯಾಗಿದೆ. ಅದನ್ನು ಪ್ರತಿಯೊಬ್ಬರೂ ಮನಗಂಡು ಅನುಸರಿಸಬೇಕು ಎಂದು ಹೇಳಿದರು.

ಎಲ್ಲೋ ಅರಣ್ಯ ನಾಶ ಮಾಡಿದರೆ ಇನ್ನೆಲ್ಲೋ ಅದರ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಬೆಟ್ಟಗುಡ್ಡಗಳ ಪ್ರದೇಶದಲ್ಲೂ ಪ್ರವಾಹ ಉಂಟಾಗುತ್ತದೆ ಮತ್ತೆ ಕೆಲವೆಡೆ ಬರ ಪರಿಸ್ಥಿತಿ ತಲೆದೊರುತ್ತದೆ. ಹವಾಮಾನದಲ್ಲಿ, ಋುತುಮಾನದಲ್ಲಿ ವ್ಯತ್ಯಾಸಗಳಾಗುತ್ತವೆ ಇದೆಲ್ಲವೂ ಒಂದಿಲ್ಲೊಂದು ಕಡೆ ಆಗುತ್ತಿರುವ ಅರಣ್ಯ ನಾಶ, ಪರಿಸರ ಮಾಲಿನ್ಯದ ಪ್ರತಿಫಲವಾಗಿದೆ ಎಂದರು.

ದತ್ತಸಾಯಿ ಶನೇಶ್ವರ ದೇವಸ್ಥಾನ ಕಮಿಟಿಯ ಉಪಾಧ್ಯಕ್ಷ ಕಿರಣ ಉಪ್ಪೆ, ಪಪಂ ಸದಸ್ಯ ದಯಾನಂದ ಘೂಳೆ, ಸಂಗಯ್ಯ ಸ್ವಾಮಿ, ಕಾಂಗ್ರೆಸ್ ಮುಖಂಡ ಸುಧಾಕಾರ್ ಕೊಳ್ಳುರ್, ತಿಪ್ಪಾರೆಡ್ಡಿ, ದೇವಸ್ಥಾನದ ಅರ್ಚಕರಾದ ಉಮಾಕಾಂತ ಸ್ವಾಮಿ, ರತಿಕಾಂತ ಖರಜಿಗೆ ಮಸ್ಕಲ್ ಸೇರಿದಂತೆ ಅನೇಕರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ