ತೆಲಂಗಾಣ ಫೋನ್ ಕದ್ದಾಲಿಕೆ ಪ್ರಕರಣ: ಇಂಟೆಲ್ ಬ್ಯೂರೋ ಮಾಜಿ ಮುಖ್ಯಸ್ಥರೇ ನಂ.1 ಆರೋಪಿ..! - Mahanayaka
3:07 PM Tuesday 18 - November 2025

ತೆಲಂಗಾಣ ಫೋನ್ ಕದ್ದಾಲಿಕೆ ಪ್ರಕರಣ: ಇಂಟೆಲ್ ಬ್ಯೂರೋ ಮಾಜಿ ಮುಖ್ಯಸ್ಥರೇ ನಂ.1 ಆರೋಪಿ..!

25/03/2024

ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ರಾಜ್ಯವನ್ನು ಬೆಚ್ಚಿಬೀಳಿಸಿದ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ತೆಲಂಗಾಣ ಗುಪ್ತಚರ ಬ್ಯೂರೋದ ಮಾಜಿ ಮುಖ್ಯಸ್ಥ ಟಿ ಪ್ರಭಾಕರ್ ರಾವ್ ಅವರನ್ನು ಆರೋಪಿ ನಂ.1 ಎಂದು ಹೆಸರಿಸಲಾಗಿದೆ.

ಕೆ.ಚಂದ್ರಶೇಖರ್ ರಾವ್ ನೇತೃತ್ವದ ಹಿಂದಿನ ಬಿಆರ್ ಎಸ್ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರ ಫೋನ್‌ಗಳನ್ನು ಅಕ್ರಮವಾಗಿ ಟ್ಯಾಪ್ ಮಾಡುವ ಮೂಲಕ ಎಲೆಕ್ಟ್ರಾನಿಕ್ ಡೇಟಾವನ್ನು ಸಂಗ್ರಹಿಸಲಾಗಿದೆ ಎಂದು ಹೇಳಲಾದ ರಾವ್ ಅವರು ಅಮೆರಿಕದಲ್ಲಿದ್ದಾರೆ ಎಂದು ವರದಿಯಾಗಿದೆ. ಅವರ ಹೆಸರಿನಲ್ಲಿ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.

ರಾವ್ ಅವರ ಹೈದರಾಬಾದ್ ನಲ್ಲಿರುವ ಮನೆ, ಐ ನ್ಯೂಸ್ ಎಂಬ ತೆಲುಗು ಟಿವಿ ಚಾನೆಲ್ ನಡೆಸುತ್ತಿರುವ ಶ್ರವಣ್ ರಾವ್ ಅವರ ನಿವಾಸ ಸೇರಿದಂತೆ ಸುಮಾರು ಒಂದು ಡಜನ್ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ.

ಸ್ಥಳೀಯ ಶಾಲೆಯೊಂದರ ಆವರಣದಲ್ಲಿಫೋನ್ ಕದ್ದಾಲಿಕೆ ಉಪಕರಣಗಳು (ಇಸ್ರೇಲ್ ನಿಂದ) ಮತ್ತು ಸರ್ವರ್ ಗಳನ್ನು ಸ್ಥಾಪಿಸಲು ಶರವಣ್ ರಾವ್ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ನಗರ ಕಾರ್ಯಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮತ್ತೊಬ್ಬ ಪೊಲೀಸ್ ಅಧಿಕಾರಿ ರಾಧಾ ಕಿಶನ್ ರಾವ್ ಅವರನ್ನೂ ಆರೋಪಿ ಎಂದು ಹೆಸರಿಸಲಾಗಿದ್ದು, ಅವರಿಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ