ಮಗುವಿನ ಹುಟ್ಟುಹಬ್ಬವನ್ನು ಆಚರಿಸಿ ಮಾದರಿ:  ಕೇಕ್ ಕತ್ತರಿಸಿ ಅನಾಥಾಶ್ರಮದ ಮಕ್ಕಳ ಜೊತೆ ಸಂಭ್ರಮಿಸಿದ ಕುಟುಂಬ                - Mahanayaka

ಮಗುವಿನ ಹುಟ್ಟುಹಬ್ಬವನ್ನು ಆಚರಿಸಿ ಮಾದರಿ:  ಕೇಕ್ ಕತ್ತರಿಸಿ ಅನಾಥಾಶ್ರಮದ ಮಕ್ಕಳ ಜೊತೆ ಸಂಭ್ರಮಿಸಿದ ಕುಟುಂಬ               

chikkamagaluru
26/09/2023


Provided by

ಕೊಟ್ಟಿಗೆಹಾರ: ಬಣಕಲ್ ಸಮೀಪದ ಚಕ್ಕಮಕ್ಕಿಯ ದಾರುಲ್ ಬಯಾನ್ ಖಲಂಧರಿಯಾ ಎಜುಕೇಷನಲ್ ಟ್ರಸ್ಟ್ ಅನಾಥಾಶ್ರಮದಲ್ಲಿ ಅನಾಥ ಮಕ್ಕಳ ಜೊತೆಗೆ  ತನ್ನ ಐದು ವರ್ಷದ ಮಗು ಸೋನಾಲ್ ಜೆನೀಶಾ ಲೋಬೊ ಅವಳ  ಹುಟ್ಟು ಹಬ್ಬವನ್ನು  ಆಶ್ರಮದಲ್ಲಿ ಕುಟುಂಬ ಸೇರಿ ಆಚರಿಸಿ ಮಗುವಿನ ತಂದೆ ಚೇಗು ಗ್ರಾಮದ ಪೆಡ್ಡಿ ಲೋಬೊ ಮಾದರಿಯಾಗಿದ್ದಾರೆ.

ಮಗುವಿನ ತಾಯಿ ಲೆಮಿನಾ ಹಾಗೂ ಚಿಕ್ಕಮ್ಮ ಆಶಾ,ಚಿಕಪ್ಪ ಫ್ರಾನ್ಸಿಸ್ ಲೋಬೊ ಇವರುಗಳು ಸೇರಿ ಮಗುವಿನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿ ಮಾನವೀಯ ಮೌಲ್ಯಧರಿತ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಈ ಬಗ್ಗೆ ಪೆಡ್ಡಿ ಲೋಬೊ ಮಾತನಾಡಿ ‘  ಕುಟುಂಬದಿಂದ ದೂರವಿರುವ ಅನಾಥ ಮಕ್ಕಳ ಜೊತೆಗೆ ನಾವು ಬೆರೆತು ಅವರ ಮುಖದಲ್ಲಿ ಸಂತಸ  ತರುವುದರಿಂದ ಮನಸ್ಸಿಗೆ ಒಂದು ತರಹದ ತೃಪ್ತಿ ಸಿಗುತ್ತದೆ. ನಾವು ಆಡಂಬರದಿಂದ ದುಂದುವೆಚ್ಚ ವೆಚ್ಚ ಮಾಡಿದರೆ ಆದರಿಂದ ಪ್ರಯೋಜನವಿಲ್ಲ.  ನಿರ್ಗತಿಕ ಅಥವಾ ಬಡ ಮಕ್ಕಳಿಗೆ ಒಂದು ಹೊತ್ತಿನ ಅನ್ನದಾನ ಮಾಡುವುದು,  ಇಲ್ಲವೇ, ಪರಿಸರದ ಕಾಳಜಿಯಲ್ಲಿ ಗಿಡಗಳನ್ನು ನೀಡುವ ಕೆಲಸಗಳಿಗೆ  ಸಮಾಜಮುಖಿ ಕೆಲಸ ಮಾಡಿದಂತಾಗುತ್ತದೆ. ಆಧುನಿಕ ಯುಗದಲ್ಲಿ ಮೋಜು ಮಸ್ತಿಗಿಂತ ಅನಾಥ ಮಕ್ಕಳ ಜೊತೆ ಕಳೆದು ಅವರಿಗೆ ಕೇಕ್ ತಿನ್ನಿಸಿ ಅವರ ಜೊತೆ ಕಳೆಯುವುದು ಕುಟುಂಬದ ಆಸೆಯೂ ಆಗಿತ್ತು.ಇದರಿಂದ ನಮಗೆ ತೃಪ್ತಿ ಸಿಕ್ಕಿದೆ ‘ಎಂದರು.

ಈ ಸಂದರ್ಭದಲ್ಲಿ  ಚಕ್ಕಮಕ್ಕಿ ದಾರುಲ್ ಬಯಾನ್ ಖಲಂದರಿಯ್ಯಾ ಎಜುಕೇಷನ್ ಇನ್ಸ್ಟಿಟ್ಯೂಟ್ (ಅನಾಥಾಶ್ರಮ) ಇದರ ಪ್ರಾಂಶುಪಾಲರಾದ ಸಿನಾನ್ ಫೈಝಿ ಖಲಂದರಿ, ಅಧ್ಯಾಪಕರಾದ ಝೈದ್ ಫೈಝಿ ಖಲಂದರಿ, ಸಹ ಅಧ್ಯಾಪಕರಾದ ಮಜೀದ್ ಫೈಝಿ ಖಲಂದರಿ ಹಾಗೂ ದಾರುಲ್ ಬಯಾನ್ ಖಲಂದರಿಯ್ಯಾ ಎಜುಕೇಷನ್ ಇನ್ಸ್ಟಿಟ್ಯೂಟ್ ಇದರ ವಿದ್ಯಾರ್ಥಿಗಳು ಮತ್ತು ಮ್ಯಾನ್ ಕೈಂಡ್ ಕ್ಲಬ್ ಇದರ ಸದಸ್ಯರಾದ ಸಾಜಿದ್ ಬಣಕಲ್,  ಅನಾಥಾಶ್ರಮದಲ್ಲಿ 50ಕ್ಕೂ ಹೆಚ್ಚು ಮಕ್ಕಳು ಇದ್ದರು.

ಇತ್ತೀಚಿನ ಸುದ್ದಿ