ತಾನೇಕೆ ಪ್ರೆಸ್ ಮೀಟ್ ಮಾಡಲ್ಲ ಎಂಬುದಕ್ಕೆ ಅಸ್ಪಷ್ಟ ಉತ್ತರ ನೀಡಿದ ಪ್ರಧಾನಿ ಮೋದಿ..!

ತಾನೇಕೆ ಪತ್ರಿಕಾಗೋಷ್ಠಿ ನಡೆಸುವುದಿಲ್ಲ ಎಂಬುದಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದ್ದಾರೆ ಮಾತ್ರ ಅಲ್ಲ ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮಾಧ್ಯಮಗಳು ನಿಷ್ಪಕ್ಷಪಾತಿಯಾಗಿ ಇಲ್ಲದೆ ಇರುವುದೇ ತಾನು ಸುದ್ದಿಗೋಷ್ಠಿ ನಡೆಸದೆ ಇರುವುದಕ್ಕೆ ಕಾರಣ ಎಂದವರು ಹೇಳಿದ್ದಾರೆ.
ಪಾರ್ಲಿಮೆಂಟಿನಲ್ಲಿ ಪ್ರಶ್ನೆಗೆ ಉತ್ತರಿಸಬೇಕಾದ ಹೊಣೆಗಾರಿಕೆ ನನ್ನದು. ಇವತ್ತು ಪತ್ರಕರ್ತರಿಗೆ ಅವರವರದೇ ಆದ ವಿಚಾರಧಾರೆಗಳಿವೆ. ಮಾಧ್ಯಮಗಳು ಇವತ್ತು ಪಕ್ಷಪಾತ ರಹಿತವಲ್ಲ. ನಿಮ್ಮ ವಿಚಾರಧಾರೆಗಳು ಏನು ಮತ್ತು ನೀವು ಯಾವ ಕಡೆ ಅನ್ನೋದು ಜನರಿಗೆ ಗೊತ್ತಿದೆ. ಹಿಂದಿನ ಕಾಲದಲ್ಲಿ ಮಾಧ್ಯಮಗಳಿಗೆ ಮುಖ ಇರಲಿಲ್ಲ. ಬರೆಯೋದು ಯಾರು ಅವರ ಆದರ್ಶ ಏನು ಮುಂತಾದ ವಿಷಯಗಳ ಕುರಿತು ಯಾರೂ ಆಲೋಚಿಸುತ್ತಿರಲಿಲ್ಲ. ಆದರೆ ಇವತ್ತಿನ ದಿನಗಳು ಹಾಗಿಲ್ಲ ಎಂದು ಆಜ್ ತಕ್ ಗೆ ನೀಡಿದ ಸಂದರ್ಶನದ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿಗೋಷ್ಠಿ ನಡೆಸದೆ ಇರುವುದಕ್ಕೆ ಭಯ ಕಾರಣ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವುದರ ನಡುವೆ ಪ್ರಧಾನಿಯ ಈ ಉತ್ತರ ಬಂದಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಅವರು ಒಂದೇ ಒಂದು ಬಾರಿ ಸುದ್ದಿಗೋಷ್ಠಿ ನಡೆಸಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth