ಜನವರಿ 8 ರವರೆಗೆ ಚಿಕ್ಕಮಗಳೂರಿನಲ್ಲಿ ವಸ್ತು ಪ್ರದರ್ಶನ - Mahanayaka
2:31 AM Thursday 11 - December 2025

ಜನವರಿ 8 ರವರೆಗೆ ಚಿಕ್ಕಮಗಳೂರಿನಲ್ಲಿ ವಸ್ತು ಪ್ರದರ್ಶನ

exhibition
05/01/2025

ಚಿಕ್ಕಮಗಳೂರು: ನಗರದ  ಎಂ.ಎಲ್.ಮಂಜಯ್ಯ ಶೆಟ್ಟಿ ನರಸಿಂಹಶೆಟ್ಟಿ ಶಿಕ್ಷಕರ ಶಿಕ್ಷಣ ಕಾಲೇಜಿನಲ್ಲಿ ಜ್ಞಾನ ವಿಜ್ಞಾನ ಕಲಾ ವೈಭವ ವಸ್ತು ಪ್ರದರ್ಶನ ಇಂದಿನಿಂದ ಜನವರಿ 8 ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು ಸಿದ್ದತೆಗಳು ಭರದಿಂದ ಸಾಗಿದೆ.

ಮಲೆನಾಡು ವಿದ್ಯಾಸಂಸ್ಥೆ, ಎಂ.ಎಲ್.ಎಮ್.ಎನ್ ಬಿಎಡ್ ಕಾಲೇಜು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, 1 ಅರ್ಥ್, ಪದವಿ ಪೂರ್ವ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಸ್ತು ಪ್ರದರ್ಶನ ನಡೆಯುತ್ತಿದ್ದು ಭಾರತದ ಇತಿಹಾಸ, ಸಂಸ್ಕೃತಿ, ಕಲೆ ಮಹಾನ್ ವ್ಯಕ್ತಿಗಳ ವಿಜ್ಞಾನ, ವಾಸ್ತುಶಿಲ್ಪ, ಸ್ವಾತಂತ್ರ‍್ಯ ಹೋರಾಟಗಾರರ, ಪುರಾತನ ವಸ್ತುಗಳು ಸೇರಿದಂತೆ ಕೀಟಗಳು ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುವ ನೂರಕ್ಕೂ ಹೆಚ್ಚು ಕೀಟಗಳು ಪ್ರದರ್ಶನದಲ್ಲಿ ಇರಲಿದ್ದು 15 ರಿಂದ 20 ಸಾವಿರ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ವಸ್ತು ಪ್ರದರ್ಶನ ವೀಕ್ಷಿಸಲಿದ್ದಾರೆ.

ವಸ್ತು ಪ್ರದರ್ಶನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಜ್ಞಾನಾಸಕ್ತರಿಗೆ ಉಪಯುಕ್ತ ಕಾರ್ಯಕ್ರಮ ಇದಾಗಿದೆ. ಕಾಲೇಜು ಆವರಣದಲ್ಲಿ ವಸ್ತುಗಳನ್ನು ಜೋಡಿಸಿ ವಸ್ತು ಪ್ರದರ್ಶನಕ್ಕೆ ಸಿದ್ದತೆ ಮಾಡಲಾಗುತ್ತಿದ್ದು ಎಂ.ಎಲ್.ಎಂ.ಎನ್ ಬಿಎಡ್ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ.ರಮೇಶ್, ಎಂ.ಎಲ್. ಮಂಜಯ್ಯ ಶೆಟ್ಟಿ ನರಸಿಂಹಶೆಟ್ಟಿ ಶಿಕ್ಷಕರ ಶಿಕ್ಷಣ ಚೈತನ್ಯ ಭಾರತಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ ಗಣೇಶ್, 1 ಅರ್ಥ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ  ಭರತ್ ಸಿ.ವಿ, ವಸ್ತು ಸಂಗ್ರಹಕಾರರಾದ  ಅಶೋಕ್, ಕೀಟ ತಜ್ಞ ಡಾ.ಅವಿನಾಶ್ ಮುಂತಾದವರು ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ