ಬ್ರ್ಯಾಂಡ್ ಬೆಂಗಳೂರಿಗೆ ಸಲಹೆಗಳನ್ನು ನೀಡುವ ಅವಧಿ ವಿಸ್ತರಣೆ - Mahanayaka
12:34 PM Saturday 23 - August 2025

ಬ್ರ್ಯಾಂಡ್ ಬೆಂಗಳೂರಿಗೆ ಸಲಹೆಗಳನ್ನು ನೀಡುವ ಅವಧಿ ವಿಸ್ತರಣೆ

d.k shivakumar
01/07/2023


Provided by

ಬೆಂಗಳೂರು ನಗರ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಅಭಿಪ್ರಾಯ/ಅನಿಸಿಕೆ/ ಸಲಹೆಗಳನ್ನು ನೀಡುವ ಅವಧಿಯನ್ನು ದಿನಾಂಕ: 30.06.2023 ರಿಂದ 15.07.2023 ರವರೆಗೆ ವಿಸ್ತರಿಸಲಾಗಿದೆ.

ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಆದ ಡಿ.ಕೆ.ಶಿವಕುಮಾರ್ ರವರು ಬೆಂಗಳೂರು ನಗರ ಸಮಗ್ರ ಅಭಿವೃದ್ಧಿ ಹಾಗೂ ಬ್ರ್ಯಾಂಡ್ ಬೆಂಗಳೂರು ಮಾಡುವ ಉದ್ದೇಶದಿಂದ ಈಗಾಗಲೇ ಸರ್ವಪಕ್ಷ ಶಾಸಕರ ಜೊತೆ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರ ಜೊತೆ ಸಭೆ ನಡೆಸಿ ಅಭಿಪ್ರಾಯ/ಸಲಹೆಗಳನ್ನು ಪಡೆದಿರುತ್ತಾರೆ.

ಮುಂದುವರೆದು, ಬೆಂಗಳೂರಿನ ನಾಗರಿಕರು ಹಾಗೂ ಬೇರೆ ರಾಜ್ಯ/ದೇಶ/ ವಿದೇಶದಲ್ಲಿರುವಂತಹ ಎಲ್ಲಾ ವರ್ಗದ ನಾಗರಿಕರು ಬೆಂಗಳೂರಿನ ಅಭಿವೃದ್ಧಿಗಾಗಿ ಏಳು ವಿಚಾರಗಳಾದ ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಹಿತ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು ಹಾಗೂ ಜಲಸುರಕ್ಷಾ ಬೆಂಗಳೂರು ಕುರಿತು ತಮ್ಮ ಅಭಿಪ್ರಾಯ/ಅನಿಸಿಕೆ/ಸಲಹೆಗಳನ್ನು ನೀಡುವ ಸಲುವಾಗಿ ದಿನಾಂಕ: 21-06-2023 ರಂದು ಪ್ರತ್ಯೇಕ ವೆಬ್ ಫೋರ್ಟಲ್ www.brandbengaluru.karnataka.gov.in ಬಿಡುಗಡೆಗೊಳಿಸಿ ದಿನಾಂಕ: 30-06-2023 ರವರೆಗೆ ನಾಗರಿಕರು ಅಭಿಪ್ರಾಯ/ಅನಿಸಿಕೆ/ಸಲಹೆಗಳನ್ನು ನೀಡುವಂತೆ ನಾಗರಿಕರಲ್ಲಿ ಕೋರಲಾಗಿತ್ತು.

ಅದರಂತೆ, ನಾಗರಿಕರಿಂದ ನಿರೀಕ್ಷೆಗೂ ಮೀರಿ ಅನಿಸಿಕೆ/ಸಲಹೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಮಗ್ರ ಅಭಿವೃದ್ಧಿಗೆ ನಾಗರಿಕರು ನೀಡುವ ಅಭಿಪ್ರಾಯ/ಸಲಹೆಗಳ ಸಮೀಕ್ಷೆಯ ಅವಧಿಯನ್ನು ದಿನಾಂಕ: 30.06.2023 ರಿಂದ ದಿನಾಂಕ: 15.07.2023 ರವರೆಗೆ ವಿಸ್ತರಿಸಲಾಗಿದ್ದು, ಎಲ್ಲಾ ನಾಗರಿಕರು ಈ ಸದಾವಕಾಶವನ್ನು ಉಪಯೋಗಿಸಿಕೊಂಡು #BrandBengaluru, #BetterBengaluru ಸಮೀಕ್ಷೆಯಲ್ಲಿ ಪಾಲ್ಗೊಂಡು ಇನ್ನೂ ಹೆಚ್ಚು-ಹೆಚ್ಚು ಸಲಹೆಗಳನ್ನು ನೀಡುವ ಮೂಲಕ ಬೆಂಗಳೂರು ನಗರ ಸಮಗ್ರ ಅಭಿವೃದ್ಧಿಗೆ ಕೈ-ಜೋಡಿಸಬೇಕಾಗಿ ವಿನಂತಿ.

ನಾಗರಿಕರು ವೆಬ್ ಪೋರ್ಟಲ್ www.brandbengaluru.karnataka.gov.inಮೂಲಕ ಮಾತ್ರವಲ್ಲದೆ ವ್ಯಾಟ್ಸ್ಆಪ್ ಸಂಖ್ಯೆ: 9480685700 ಮೂಲಕವೂ ಅಭಿಪ್ರಾಯ/ ಅನಿಸಿಕೆ/ ಸಲಹೆಗಳನ್ನು ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ: 1533 ಗೆ ಕರೆಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ