ಕೊರೊನಾ ಲಸಿಕೆ ಪಡೆದವರ ಮೈಯಲ್ಲಿ ವಿದ್ಯುತ್  ಉತ್ಪತ್ತಿಯಾಗುತ್ತದೆ ಎಂಬ ವಿಡಿಯೋದ ಅಸಲಿಯತ್ತೇನು? - Mahanayaka
5:47 PM Thursday 16 - October 2025

ಕೊರೊನಾ ಲಸಿಕೆ ಪಡೆದವರ ಮೈಯಲ್ಲಿ ವಿದ್ಯುತ್  ಉತ್ಪತ್ತಿಯಾಗುತ್ತದೆ ಎಂಬ ವಿಡಿಯೋದ ಅಸಲಿಯತ್ತೇನು?

shivakumar
11/06/2021

ಮೈಸೂರು: ಕೊರೊನಾ ಲಸಿಕೆ ಪಡೆದವರ ಮೈಮೇಲೆ ವಿದ್ಯುತ್ ಉತ್ಪತ್ತಿಯಾಗುತ್ತಿದೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋದ ಅಸಲಿಯತ್ತನ್ನು  ತಿ.ನರಸೀಪುರ ತಾಲೂಕಿನ ಕೆಬ್ಬೆಹುಂಟಿ ಗ್ರಾಮದ  ವ್ಯಕ್ತಿಯೊಬ್ಬರು ಬಯಲಿಗೆಳೆದಿದ್ದಾರೆ.


Provided by

ಕೆಬ್ಬೆಹುಂಡಿ ಗ್ರಾಮದ ಶಿವಕುಮಾರ್ ಎಂಬವರು ಈ ವಿಚಾರವನ್ನು ಬಯಲಿಗೆಳೆದಿದ್ದು, ಕೊವಿಡ್ ಲಸಿಕೆ ಪಡೆದವರ ದೇಹದ ಮೇಲೆ ವಿದ್ಯುತ್ ಉತ್ಪತ್ತಿಯಾಗಿತ್ತಿದೆ ಎನ್ನುವ ಸುಳ್ಳನ್ನು ಅವರು ಪ್ರಯೋಗ ಮಾಡುವ ಮೂಲಕ ಬಯಲಿಗೆಳೆದಿದ್ದಾರೆ.

ಚಾರ್ಜರ್ ಲೈಟ್ ನ್ನು ಮೈಮೇಲೆ ಇಟ್ಟ ತಕ್ಷಣವೇ ಆ ಲೈಟ್ ಉರಿದುಕೊಂಡಿದ್ದು, ಜನರ ಮೇಲೆ ವಿದ್ಯುತ್ ಉತ್ಪತ್ತಿಯಾಗುತ್ತಿದೆ ಎಂದು ಹುಬ್ಬಳ್ಳಿ ಮೂಲದ ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರು ಎಂದು ಹೇಳಲಾಗಿದೆ. ಆದರೆ ಇದನ್ನು ಬಯಲಿಗೆಳೆದ ಅವರು, ಈ ವಿಡಿಯೋ ಅಪ್ಪಟ ಸುಳ್ಳು ಎಂದು ಸಾಬೀತುಪಡಿಸಿದ್ದಾರೆ.

ನಾನು ಕೊವಿಡ್ ಲಸಿಕೆ ಪಡೆದಿಲ್ಲ, ಆದರೆ ನನ್ನ ಮೈಯಲ್ಲಿಯೂ ಇದೇ ರೀತಿ ಲೈಟ್ ಉರಿಸುತ್ತಾನೆ ಎಂದು ಶಿವಕುಮಾರ್ ಅವರು ಲೈಟ್ ಉರಿಸಿದ್ದಾರೆ. ಇದು ಹೇಗೆ ಸಾಧ್ಯ ಎನ್ನುವುದನ್ನು ತಿಳಿಸಿದ ಅವರು, ಮೈ ಮೇಲೆ ತೇವಾಂಶ ಇದ್ದಾಗ ಲೈಟ್ ನ ಪ್ಲಸ್ ಗೂ ಮೈನಸ್ ಅಥವಾ ನೆಗೆಟಿವ್, ಪಾಸಿಟಿವ್ ಭಾಗಕ್ಕೆ ಟಚ್ ಆದಾಗ ಚಾರ್ಜರ್ ಲೈಟ್ ಆಕಸ್ಮಿಕವಾಗಿ ಉರಿಯುತ್ತದೆ. ಇದು ಮನುಷ್ಯನ ಮೈಮೇಲೆ ವಿದ್ಯುತ್ ಉತ್ಪಾದನೆ ಆಗುವುದು ಅಲ್ಲ ಎಂದ ಅವರು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿ