ವಿಧಾನಸೌಧದಲ್ಲಿ 4 ದಿನಗಳಲ್ಲಿ ಪತ್ತೆಯಾದ ನಕಲಿ ಪಾಸ್‌ ಗಳೆಷ್ಟು ಗೊತ್ತಾ? - Mahanayaka

ವಿಧಾನಸೌಧದಲ್ಲಿ 4 ದಿನಗಳಲ್ಲಿ ಪತ್ತೆಯಾದ ನಕಲಿ ಪಾಸ್‌ ಗಳೆಷ್ಟು ಗೊತ್ತಾ?

vidhanasoudha
14/07/2023


Provided by

ಬೆಂಗಳೂರು: ರಾಜಧಾನಿಯ ವಿಧಾನಸೌಧದಲ್ಲಿ ಪ್ರವೇಶ ಪಡೆಯುವುದಕ್ಕೆ ನಕಲಿ ಪಾಸ್‌ ಗಳ ಬಳಕೆಯಾಗುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಕಲಿ ಪಾಸ್‌ಗಳನ್ನ ಬಳಸಿ ವಿಧಾನಸೌಧದಲ್ಲೇ ವ್ಯವಹಾರ ನಡೆಸಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ 300 ಕ್ಕೂ ನಕಲಿ ಪಾಸ್‌ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ವಿಧಾನಸೌಧಕ್ಕೆ ಬರುವ ಪ್ರತಿಯೊಬ್ಬರನ್ನು ತಪಾಸಣೆ ನಡೆಸಲಾಗುತ್ತಿದೆ. ಅಧಿಕೃತ ಪಾಸ್‌ ಗಳ ಕಲರ್ ಜೆರಾಕ್ಸ್, ಹಳೇ ಪಾಸ್‌ ಗಳು, ಅವಧಿ ಮುಗಿದಿರೋ ಪಾಸ್‌ಗಳನ್ನು ಬಳಸಲಾಗುತ್ತಿತ್ತು. ಅಲ್ಲದೇ ಕೆಲ ವಾಹನಗಳ ನಕಲಿ ಪಾಸ್ ಪತ್ತೆಯಾಗಿವೆ.

ತಿಪ್ಪೇರುದ್ರಪ್ಪ ಕೇಸ್ ಬಳಿಕ ಭದ್ರತಾ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ಸಿಸಿಬಿ ಮುಖ್ಯಸ್ಥರಾಗಿದ್ದ ಡಾ.ಶರಣಪ್ಪ ವಿಧಾನಸೌಧ ಭದ್ರತೆ ನೇತೃತ್ವ ವಹಿಸಿದ್ದಾರೆ.

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ