ಖ್ಯಾತ ಮಲಯಾಳಂ ನಟ ಕಲಾಭುವನ್‌ ಹನೀಫ್‌ ನಿಧನ - Mahanayaka
6:07 AM Saturday 18 - October 2025

ಖ್ಯಾತ ಮಲಯಾಳಂ ನಟ ಕಲಾಭುವನ್‌ ಹನೀಫ್‌ ನಿಧನ

kalabhavan haneef
10/11/2023

ಕೊಚ್ಚಿ: ಮಲಯಾಳಂನ ಖ್ಯಾತ ನಟ. ಮಿಮಿಕ್ರಿ ಕಲಾವಿದರಾದ ಕಲಾಭುವನ್‌ ಹನೀಫ್‌ ಕೊಚ್ಚಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.


Provided by

ಉಸಿರಾಟದ ತೊಂದರೆಯಿಂದ ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ನಿನ್ನೆ ಅವರು ನಿಧನರಾಗಿದ್ದಾರೆ.

ಮಲಯಾಳಂ ಸಿನಿಮಾ ರಂಗ ಹಾಗೂ ಮಿಮಿಕ್ರಿಯ ಕಲೆಗೆ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದ ಹನೀಫ್‌ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

1991ರಲ್ಲಿ ಚೆಪ್ಪುಕಿಲುಕ್ಕಣ್ಣ ಚನಗತಿ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಪ್ರವೇಶ ಪಡೆದಿದ್ದ ಇವರು, ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ರಂಜಿಸಿದ್ದರು.

ಇತ್ತೀಚಿನ ಸುದ್ದಿ