ಖ್ಯಾತ ತುಳು ನಟ ಅರವಿಂದ್ ಬೋಳಾರ್ ಗೆ ಅಪಘಾತ! - Mahanayaka
12:35 PM Wednesday 20 - August 2025

ಖ್ಯಾತ ತುಳು ನಟ ಅರವಿಂದ್ ಬೋಳಾರ್ ಗೆ ಅಪಘಾತ!

aravind bolar
30/01/2023


Provided by

ತುಳು ಸಿನಿಮಾದ ಹಾಸ್ಯನಟ, ಕಲಾವಿದ ‘ತುಳುನಾಡ ಮಾಣಿಕ್ಯ’ ಎಂದೇ ಖ್ಯಾತರಾಗಿರುವ ಅರವಿಂದ ಬೋಳಾರ್ ಅವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವೊಂದು ಮಂಗಳೂರು ನಗರದ ಪಂಪ್‌ ವೆಲ್ ಬಳಿ ಇಂದು ಸ್ಕಿಡ್ಡಾಗಿ ಬಿದ್ದಿದೆ.

ಅತೀ ವೇಗವಾಗಿ ಚಲಿಸಿಕೊಂಡು ಬರುತ್ತಿದ್ದ ಬಸ್ಸೊಂದು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಅರವಿಂದ್ ಬೋಳಾರ್ ತಾನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಬ್ರೇಕ್ ಹಾಕಿದ್ದು, ಈ ಸಂದರ್ಭ ಸ್ಕಿಡ್ಡಾಗಿ ಬಿದ್ದ ಪರಿಣಾಮ ಅರವಿಂದ ಬೋಳಾರ್‌ ಗೆ ಗಾಯವಾಗಿದೆ.

ಅರವಿಂದ ಬೋಳಾರ್‌ರ ಕಾಲಿಗೆ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಅರವಿಂದ್ ಬೋಳಾರ್ ‌ರ ಕಾಲಿನ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ