ಅಭಿಮಾನಿಗಳ ನೂಕುನುಗ್ಗಲು: ಕೇರಳದಲ್ಲಿ ತಮಿಳು ನಟ ವಿಜಯ್‌ ಕಾರು ಜಖಂ - Mahanayaka

ಅಭಿಮಾನಿಗಳ ನೂಕುನುಗ್ಗಲು: ಕೇರಳದಲ್ಲಿ ತಮಿಳು ನಟ ವಿಜಯ್‌ ಕಾರು ಜಖಂ

vijay
20/03/2024


Provided by

ಅಭಿಮಾನಿಗಳ ಉತ್ಸಾಹಕ್ಕೆ ನಟ ವಿಜಯ್‌ ಅವರ ಕಾರು ಜಖಂಗೊಂಡಿರುವ ಘಟನೆ ಕೇರಳದಲ್ಲಿ ನಡೆದಿದ್ದು,  ವಿಮಾನ ನಿಲ್ದಾಣದಿಂದ ವಿಜಯ್‌ ತಂಗಿರುವ ಹೊಟೇಲ್‌ ವರೆಗಿನ ರಸ್ತೆಯಲ್ಲಿ ಫಾಲೋ ಮಾಡಿಕೊಂಡು ಬಂದ ಸಾವಿರಾರು ಸಂಖ್ಯೆ ಅಭಿಮಾನಿಗಳು ಕಾರನ್ನು ಸುತ್ತವರೆದು ವಿಜಯ್‌ ಅವರನ್ನು ನೋಡಲು ಮುಗಿಬಿದ್ದಿದ್ದಾರೆ.

ಅಭಿಮಾನಿಗಳ ನೂಕುನುಗ್ಗಲಿನಿಂದಾಗಿ ವಿಜಯ್‌ ಅವರ ಕಾರಿನ ಗಾಜು ಒಡೆದಿದ್ದು, ಕಾರಿನ ಡೋರ್‌ ಜಖಂ ಆಗಿದೆ. ಬರೋಬ್ಬರಿ 14 ವರ್ಷಗಳ ಬಳಿಕ ಕೇರಳಕ್ಕೆ ವಿಜಯ್‌ ಆಗಮಿಸಿದ್ದರು. ಅವರನ್ನು ಸ್ವಾಗತಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.

ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ನಿಯಂತ್ರಣ ಸಾಧ್ಯವಾಗದಿದ್ದ ವೇಳೆ ಲಾಠಿಚಾರ್ಜ್‌ ನಡೆಸಿದ್ದಾರೆ.

ವಿಜಯ್‌ ತಮ್ಮ ಮುಂದಿನ ಸಿನಿಮಾ GOAT ಸಿನಿಮಾದ ಶೂಟಿಂಗ್‌ ಗಾಗಿ ಕೇರಳಕ್ಕೆ ತೆರಳಿದ್ದರು. ಸದ್ಯ ಅಭಿಮಾನಿಗಳ ನೂಕುನುಗ್ಗಲಿನಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದೆ. ಕೇರಳದಲ್ಲಿ 1 ವಾರಗಳ ಕಾಲ ಶೂಟಿಂಗ್‌ ನಡೆಯಲಿದ್ದು, ಚಿತ್ರವು ಮುಂದಿನ ವರ್ಷ ತೆರೆಗೆ ಬರಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ