ರೈತರಿಗೆ ರಕ್ಷಣೆ ಕೊಡದಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತೆ : ಲೋಡ್ ಶೆಡ್ಡಿಂಗ್ ವಿರುದ್ಧ ರೈತರ ಆಕ್ರೋಶ

ಚಾಮರಾಜನಗರ: ಅನಿಯಮಿತ ಲೋಡ್ ಶೆಡ್ಡಿಂಗ್ ವಿರುದ್ಧ ಆಕ್ರೋಶಗೊಂಡ ರೈತರು ಇಂದು ದಿಢೀರನೇ ಚಾಮರಾಜನಗರ ಸೆಸ್ಕ್ ಕಚೇರಿ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಸೆಸ್ಕ್
ಅಧಿಕಾರಿಗಳ ಎದುರು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರತಿಭಟನಾಕಾರರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಮಾದನಾಯ್ಕ ಎಂಬವರು ಮಾತನಾಡಿ, ಓಟು ಕೇಳುವಾಗ ಇಬ್ರು ಜೋಡೆತ್ತು ನಿಂತಂಗೆ ನಿಂತಿದದ್ದರು, ಇಂದು ಅವರು ಬರ್ತಾರಾ, ಅವರ ಅಪ್ಪ ಬರ್ತಾರಾ..? 200 ಯೂನಿಟ್ ಫ್ರಿ ಕರೆಂಟ್ ಕೊಡ್ತಿವಿ ಅಂತ ಓಟು ಹಾಕಿಸಿಕೊಂಡು ಗೆದ್ದು ಬಿಟ್ಟು ಈಗ ನೋಡಿದರೆ ಊಟ ಮಾಡೋ ಟೈಮಿಗೆ ಕರೆಂಟ್ ಇರಲ್ಲ, ಮಕ್ಕಳು ಓದೋವಾಗ ಕರೆಂಟ್ ಇರಲ್ಲ, ರೈತರ ಮಕ್ಕಳು ಎಲ್ಲಿಗೆ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಿಗೆ ರಕ್ಷಣೆ ಕೊಡದಿದ್ದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತೆ,
ಇಲ್ಲಿನ ಪರಿಸ್ಥಿರಿಯನ್ನ ಮಿನಿಸ್ಟರ್ ಗಮನಕ್ಕೆ ತರಬೇಕು, ನಮ್ಮಿಂದ ಅವರು- ಅವರಿಂದ ನಾವಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಸೆಸ್ಕ್ ಅಧಿಕಾರಿಗಳು ಸಮರ್ಪಕ ವಿದ್ಯುತ್ ಒದಗಿಸುವ ಭರವಸೆ ನೀಡಿದರು.