ತಮಿಳುನಾಡು ವಾಹನಗಳಿಗೆ ಕಾಲಿನಲ್ಲಿ ಒದ್ದು, ತಮಿಳು ಚಿತ್ರದ ಪೋಸ್ಟರ್ ಹರಿದು ರೈತರ ಆಕ್ರೋಶ - Mahanayaka

ತಮಿಳುನಾಡು ವಾಹನಗಳಿಗೆ ಕಾಲಿನಲ್ಲಿ ಒದ್ದು, ತಮಿಳು ಚಿತ್ರದ ಪೋಸ್ಟರ್ ಹರಿದು ರೈತರ ಆಕ್ರೋಶ

chamarajanagara
29/09/2023


Provided by

ಚಾಮರಾಜನಗರ:  ಕರ್ನಾಟಕ ಬಂದ್ ಹಿನ್ನೆಲೆ ಚಾಮರಾಜನಗರದಲ್ಲಿ ರೈತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ವಾಹನಗಳಿಗೆ ಕಾಲಿನಿಂದ ಒದ್ದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

chamarajanagara

ತಮಿಳು ವಾಹನದ ನಂಬರ್ ಪ್ಲೇಟ್ ಗೆ ರೈತರು ಒದ್ದಿದ್ದಾರೆ. ಪ್ರತಿಭಟನಾಕಾರರನ್ನು ನೋಡಿ ಕಾರಿನಲ್ಲಿದ್ದ ತಮಿಳರು ಗಾಬರಿಯಾಗಿದ್ದಾರೆ. ಚಾಮರಾಜನಗರದಿಂದ ತಮಿಳುನಾಡಿಗೆ ಹೋಗುತ್ತಿದ್ದ ಕಾರು ಸಂಚರಿಸುತ್ತಿತ್ತು. ತಕ್ಷಣವೇ ಮಧ್ಯ ಪ್ರವೇಶಿಸಿದ ಪೊಲೀಸರು ವಾಹನ ವಾಪಸ್ ಕಳಿಸಿದ್ದಾರೆ.

ತಮಿಳು ಚಲನ ಚಿತ್ರ ಪೋಸ್ಟ್ ಗಳನ್ನ ಕೂಡ ಪ್ರತಿಭಟನಾಕಾರರು ಹರಿದು ಆಕ್ರೋಶ ಹೊರಹಾಕಿದರು. ನಗರ ಸಿದ್ದಾರ್ಥ ಚಿತ್ರಮಂದಿರಕ್ಕೆ ನುಗ್ಗಿ ಪೋಸ್ಟರ್ ಗಳನ್ನ ಪ್ರತಿಭಟನಾಕಾರರು ಹರಿದು ಹಾಕಿದ್ದಾರೆ.  ಕ್ಷಣ ಕ್ಷಣಕ್ಕೂ ಚಾಮರಾಜನಗರದಲ್ಲಿ ಪ್ರತಿಭಟನೆ ತೀವ್ರವಾಗುತ್ತಿದೆ.

ಇತ್ತೀಚಿನ ಸುದ್ದಿ