ಪೂರ್ವ ಮುಂಗಾರುಗೆ ರೈತರ ತಯಾರಿ |  ಹತ್ತಿ ಬೀಜ ಸಿಗದೇ ಪರದಾಟ!! - Mahanayaka
2:11 AM Saturday 18 - October 2025

ಪೂರ್ವ ಮುಂಗಾರುಗೆ ರೈತರ ತಯಾರಿ |  ಹತ್ತಿ ಬೀಜ ಸಿಗದೇ ಪರದಾಟ!!

hatti
03/04/2023

ಚಾಮರಾಜನಗರ: ಪೂರ್ವ ಮುಂಗಾರು ಕೃಷಿಗೆ ಜಿಲ್ಲೆಯ  ರೈತರು ಅಣಿಯಾಗುತ್ತಿದ್ದು ಈಗಾಗಲೇ ಭೂಮಿ ಹದ ಮಾಡಿ ಮಳೆಗಾಗಿ ಕಾಯುತ್ತಿದ್ದಾರೆ. ಈ ಹೊತ್ತಿನಲ್ಲಿ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಹೋಬಳಿಯಲ್ಲಿ ಬಿತ್ತನೆ ಬೀಜ ಸಿಗದೇ ರೈತರು ಪರದಾಡುತ್ತಿರುವ ಘಟನೆ ನಡೆದಿದೆ.


Provided by

ಹೌದು…., ಎರಡು ವಾರಗಳಿಂದ ಜಿಲ್ಲೆಯಲ್ಲಿ ಸುಡು ಬಿಸಿಲು ಹೆಚ್ಚಾಗಿದ್ದರೂ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಹಾಗಾಗಿ,  ರೈತರು ಮುಂಗಾರು ಪೂರ್ವ ಮಳೆಯ ನಿರೀಕ್ಷೆಯಲ್ಲಿ ಭೂಮಿಯನ್ನು ಹದಗೊಳಿಸಿ ಬಿತ್ತನೆ ಮಾಡಲು ರೆಡಿಯಾಗುತ್ತಿದ್ದು ಈಗ ಹತ್ತಿ ಬೀಜ ಕೊರತೆ ಎದುರಾಗಿ ಅನ್ನದಾತರು ಕಂಗಾಲಾಗಿದ್ದಾರೆ.

ಕೇವಲ ಎರಡೇ ತಾಸಿಗೆ ಬೇಗೂರಿನ ಬೀಜ ಮಾರಾಟ ಮಳಿಗೆ ಬಾಗಿಲು ಮುಚ್ಚಿದ್ದು ನೂರಾರು ಮಂದಿ ರೈತರು ಹತ್ತಿ ಬೀಜ ಸಿಗದೇ ಆಕ್ರೋಶ ಹೊರಹಾಕುತ್ತಿದ್ದಾರೆ. ಬೀಜ ಕೊರತೆ ಎದುರಾದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕ ತನಗೆ ಬೇಕಾದವರಿಗೆ ಬೀಜ ಮಾರಾಟ ಮಾಡಿ ಬಾಗಿಲು ಮುಚ್ಚಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ನೂರಾರು ಮಂದಿ ರೈತರು ಬೀಜ ಸಿಗದೇ ಸ್ಥಳದಲ್ಲೇ ಬೀಡು ಬಿಟ್ಟುವುದರಿಂದ ಪೊಲೀಸರು ದೌಡಾಯಿಸಿ ಸಮಾಧಾನಪಡಿಸುವ ಕೆಲಸ ಮಾಡುತ್ತಿದ್ದಾರೆ. ಮಳೆ ಬಂದರೇ ಬೀಜ ಇಲ್ಲಾ, ಬೆಳೆ ಬಂದರೆ ಬೆಲೆ ಇಲ್ಲಾ ಎಂಬ ಸ್ಥಿತಿ ರೈತರದ್ದಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ