ದೀರ್ಘ ಅವಧಿಯ ಪ್ರತಿಭಟನೆಗೆ ಬ್ರೇಕ್: ಪ್ರತಿಭಟನಾ ನಿರತ ರೈತರನ್ನು ಹೊರಗೆ ಕಳಿಸಿದ ಪೊಲೀಸರು
ಒಂದು ವರ್ಷಕ್ಕೂ ಹೆಚ್ಚು ಕಾಲ ನಿರ್ಬಂಧಿಸಲಾಗಿದ್ದ ಶಂಭು ಮತ್ತು ಖನೌರಿ ಪ್ರತಿಭಟನಾ ಸ್ಥಳಗಳಿಂದ ಪಂಜಾಬ್ ಪೊಲೀಸರು ಇಂದು ರೈತರನ್ನು ಹೊರಗೆ ಕಳಿಸಿದ್ದಾರೆ. ತಾತ್ಕಾಲಿಕ ವೇದಿಕೆಗಳನ್ನು ನೆಲಸಮಗೊಳಿಸಿದ ನಂತರ ಮತ್ತು ರೈತರು ನಿಲ್ಲಿಸಿದ್ದ ಟ್ರಾಲಿಗಳು ಮತ್ತು ಇತರ ವಾಹನಗಳನ್ನು ತೆಗೆದುಹಾಕಿದ ನಂತರ ಪ್ರತಿಭಟನಾ ಸ್ಥಳಗಳನ್ನು ತೆರವುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ. ಬಿಗಿ ಪೊಲೀಸ್ ಕ್ರಮದ ನಡುವೆ ಸರ್ವನ್ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ದಲ್ಲೆವಾಲ್ ಸೇರಿದಂತೆ ಹಲವಾರು ರೈತ ಮುಖಂಡರನ್ನು ಕೇಂದ್ರ ನಿಯೋಗದೊಂದಿಗಿನ ಸಭೆಯಿಂದ ಹಿಂದಿರುಗುತ್ತಿದ್ದಾಗ ಮೊಹಾಲಿಯಲ್ಲಿ ಬಂಧಿಸಲಾಯಿತು.
ಇನ್ನು ಪ್ರಮುಖ ರೈತ ಮುಖಂಡರಾದ ದಲ್ಲೆವಾಲ್ ಮತ್ತು ಪಂಧೇರ್ ಅವರ ಬಂಧನದ ನಂತರ ಪಂಜಾಬ್ ನ ಶಂಭು ಮತ್ತು ಖನೌರಿ ಗಡಿಗಳಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸಲಾಯಿತು. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಿಂದ ರೈತರ ಪ್ರತಿಭಟನೆಯನ್ನು ಮತ್ತಷ್ಟು ನಿರ್ಬಂಧಿಸಲು ಹರಿಯಾಣ – ಪಂಜಾಬ್ ಶಂಭು ಗಡಿಯಲ್ಲಿ ನಿರ್ಮಿಸಲಾದ ಕಾಂಕ್ರೀಟ್ ಬ್ಯಾರಿಕೇಡ್ ಗಳನ್ನು ತೆಗೆದುಹಾಕಲು ಪೊಲೀಸರು ಬುಲ್ಡೋಜರ್ ಗಳನ್ನು ಬಳಸಲಾಯಿತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj



























