ರಾತ್ರಿ ಹೊರಗೆ ಹೋಗಿದ್ದ ಮಗ ವಾಪಸ್ ಬರುವಾಗ ತಂದೆ—ಸಹೋದರ ಹೆಣವಾಗಿದ್ದರು | ಬೆಳ್ತಂಗಡಿಯಲ್ಲೊಂದು ಹೃದಯ ವಿದ್ರಾವಕ ಘಟನೆ - Mahanayaka

ರಾತ್ರಿ ಹೊರಗೆ ಹೋಗಿದ್ದ ಮಗ ವಾಪಸ್ ಬರುವಾಗ ತಂದೆ—ಸಹೋದರ ಹೆಣವಾಗಿದ್ದರು | ಬೆಳ್ತಂಗಡಿಯಲ್ಲೊಂದು ಹೃದಯ ವಿದ್ರಾವಕ ಘಟನೆ

belthangady crime news
22/11/2022

ಬೆಳ್ತಂಗಡಿ: ಕಾಡಿನ ವಿಷ ಪೂರಿತ ಅಣಬೆಯನ್ನು ಸೇವಿಸಿದ ತಂದೆ ಹಾಗೂ ಮಗ ಮೃತಪಟ್ಟಿರುವ  ಘಟನೆ ನ.22 ರಂದು ಬೆಳ್ತಂಗಡಿ ತಾಲೂಕಿನ ಪುದುವೆಟ್ಟುವಿನಲ್ಲಿ ನಡೆದಿದೆ.


Provided by

ಪುದುವೆಟ್ಟು ಗ್ರಾಮದ  ಕೇರಿಮಾರು ನಿವಾಸಿಗಳಾದ ಗುರುವ(80) ಹಾಗೂ ಇವರ ಪುತ್ರ ಓಡಿಯಪ್ಪ(41) ಮೃತಪಟ್ಟವರು.

ತೀರ ಬಡ ಕುಟುಂಬದ ಮನೆಯಲ್ಲಿ ತಂದೆ ಗುರುವ ಹಾಗೂ ಇಬ್ಬರು ಮಕ್ಕಳಾದ ಕರ್ತ ಮತ್ತು ಓಡಿಯಪ್ಪ ನೆಲೆಸಿದ್ದರು. ಓಡಿಯಪ್ಪ ಒಂದಿಷ್ಟು ಮಾನಸಿಕ ಅಸ್ಬಸ್ಥನಾಗಿದ್ದು ವಿವಾಹವಾಗಿರಲಿಲ್ಲ.

ಸೋಮವಾರ ಸಂಜೆಯ ವೇಳೆ ಕಾಡಿನಿಂದ ಅಣಬೆ ತಂದು ಓಡಿಯಪ್ಪ ಸಾರು ಮಾಡುತ್ತಿರುವುದನ್ನು ನೋಡಿ ಕರ್ತ ಪೇಟೆಗೆಂದು ಹೋಗಿದ್ದವರು ರಾತ್ರಿ ಮನೆಗೆ ಹಿಂತಿರುಗಿರಲಿಲ್ಲ ಅವರು ಬೆಳಿಗ್ಗೆ ಬಂದು ನೋಡಿದಾಗ ತಂದೆ ಹಾಗೂ ಸಹೋದರ ಮನೆಯಂಗಳದಲ್ಲಿ ಮೃತಪಟ್ಟು ಬಿದ್ದಿರುವುದು ಕಂಡು ಬಂದಿರುವುದಾಗಿ ಅವರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಪೊಲೀಸರು ಕೂಡಲೇ ಸ್ಥಳಕಗಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೆಯಂಗಳದಲ್ಲಿ ಇವರಿಬ್ಬರೂ ಹೊರಳಾಡಿರುವುದು ಕಂಡು ಬಂದಿದ್ದು ವಾಂತಿ ಮಾಡಿದ್ದು ಮಲ ಮೂತ್ರ ವಿಸರ್ಜನೆ ಮಾಡಿರುವುದು ಕಂಡು ಬಂದಿದೆ. ಮನೆಯ ಸಮೀಪದಲ್ಲಿ ಯಾವುದೇ ಮನೆಗಳಿಲ್ಲವಾಗಿದ್ದು ಮಾನಸಿಕ ಅಸ್ವಸ್ಥನಾಗಿದ್ದ ಓಡಿಯಪ್ಪ ಆಗಾಗ ಬೊಬ್ಬೆ ಹೊಡೆಯುತ್ತಿದ್ದ ಕಾರಣ ರಾತ್ರಿ ಬೊಬ್ಬೆ ಕೇಳಿಯೂ ಯಾರು ಇತ್ತ ಗಮನಿಸಿರಲಿಲ್ಲ ಎನ್ನಲಾಗಿದೆ. ಹಿರಿಯ ಮಗ ಕರ್ತ ಬಂದು ನೋಡಿದಾಗಲೇ ಇವರು ಮೃತಪಟ್ಟಿರುವ ವಿಚಾರ ಬಹಿರಂಗ ಗೊಂಡಿದೆ.

ಕರ್ತ ರಾತ್ರಿ ಮನೆಗೆ ಹಿಂತಿರುಗದ ಕಾರಣ ಬದುಕಿ ಉಳಿದಿದ್ದಾರೆ. ಮನೆಯೊಳಗೆ ಅಣಬೆ ಸಾರು ಮಾಡಿ ಇಟ್ಟುರುವುದು ಕಂಡು ಬಂದಿದ್ದು ಇದೇ ಅವರ ಸಾವಿಗೆ ಕಾರಣವಾಗಿರಬಹುದು ಎಂದು ಅನುಮಾನಿಸಲಾಗಿದೆ. ಪೊಲೀಸರು ಒಟ್ಟು ಪ್ರಕರಣದ ಬಗ್ಗೆ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ