ಹನೂರು: ಅಪ್ಪ ಕಾಂಗ್ರೆಸ್ ಅಭ್ಯರ್ಥಿ– ಮಗ ಪಕ್ಷೇತರನಾಗಿ ನಾಮಿನೇಷನ್

ಚಾಮರಾಜನಗರ: ರಾಜಕೀಯ ಎಂದರೇ ಹಾಗೇ ನಿಗೂಢ, ಒಮ್ಮೆಗೆ ಅರ್ಥವಾಗದ, ಹತ್ತಾರು ಪ್ಲಾನ್ ಗಳಿರುವ ಅಖಾಡ ಎಂಬುದಕ್ಕೆ ಇದೇ ನೋಡಿ ನಿದರ್ಶನ. ಅಪ್ಪ ಮೂರು ಬಾರಿ ಎಂಎಲ್ ಎ ಆಗಿ ನಾಲ್ಕನೇ ಬಾರಿ ಕಣಕ್ಕಿಳಿಯುತ್ತಿದ್ದರೇ ಮಗ ಪಕ್ಷೇತರನಾಗಿ ನಾಮಿನೇಷನ್ ಸಲ್ಲಿಸಿದ್ದಾರೆ.
ಹೌದು…,ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ನರೇಂದ್ರ ಮಂಗಳವಾರ ನಾಮಿನೇಷನ್ ಸಲ್ಲಿಸಲಿದ್ದಾರೆ. ಆದರೆ, ಅವರ ಮಗ ನವನೀತ್ ಗೌಡ ಇಂದು ಪಕ್ಷೇತರನಾಗಿ ಉಮೇದುವಾರಿಕೆ ಸಲ್ಲಿಸುವ ಮೂಲಕ ಎದುರಾಳಿಗಳ ತಲೆಗೆ ಹುಳು ಬಿಟ್ಟಿದ್ದಾರೆ.
ಈಗಾಗಲೇ ನರೇಂದ್ರ ಪರ ಮಗ ನವನೀತ್ ಬೆಟ್ಟಗುಡ್ಡ ಹತ್ತಿಳಿದು ಪ್ರಚಾರ ನಡೆಸಿದ್ದು, ತಮ್ಮ ಕುಟುಂಬದ ಮತ ಬ್ಯಾಂಕ್ ಬೇರೆಯವರ ಪಾಲಾಗದಂತೆ ಎಚ್ಚರ ವಹಿಸಿದ್ದಾರೆ. ಆದರೆ, ಈ ನಡುವೆ ನವನೀತ್ ಗೌಡ ಪಕ್ಷೇತರನಾಗಿ ನಾಮಿನೇಷನ್ ಕೂಡ ಫೈಲ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಮಗನಿಗೆ ನಾಮಿನೇಷನ್ ಫೈಲ್ ಮಾಡಿಸುವ ಮೂಲಕ ಎಲೆಕ್ಷನ್ ಪಾಠವನ್ನು ಎಂಎಲ್ಎ ನರೇಂದ್ರ ಧಾರೆ ಎರೆಯುವುದು ಆಗಿದೆ. ಇಲ್ಲವೇ, ಬೇರೆ ಏನೂ ರಣನೀತಿ ಇದೆಯೋ ಸದ್ಯಕ್ಕಂತೂ ತಿಳಿಯದಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw