ಮಗಳನ್ನು ಕೊಂದವನ ತಂದೆಯನ್ನು ಕೊಂದು ಸೇಡು ತೀರಿಸಿಕೊಂಡ ಅಪ್ಪ! - Mahanayaka

ಮಗಳನ್ನು ಕೊಂದವನ ತಂದೆಯನ್ನು ಕೊಂದು ಸೇಡು ತೀರಿಸಿಕೊಂಡ ಅಪ್ಪ!

mandya case
15/05/2025

ಮಂಡ್ಯ: ಶಿಕ್ಷಕಿಯಾಗಿದ್ದ ಮಗಳನ್ನು ಹತ್ಯೆ ಮಾಡಿದ ಆರೋಪಿಯ ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಸೇಡು ತೀರಿಸಿಕೊಂಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ
ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ನರಸಿಂಹೇಗೌಡ ಹತ್ಯೆಗೊಳಗಾದ ವ್ಯಕ್ತಿಯಾಗಿದ್ದಾರೆ. ಇವರ ಪುತ್ರ ನಿತೀಶ್ ಎಂಬಾತ ಶಿಕ್ಷಕಿ ದೀಪಿಕಾ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಇದೇ ಸೇಡಿನಿಂದ ಶಿಕ್ಷಕಿ ದೀಪಿಕಾಳ ತಂದೆ ವೆಂಕಟೇಶ್ ಮೇ 6ರಂದು ಮಾಣಿಕ್ಯನಹಳ್ಳಿ ಗೇಟ್ ಬಳಿ ನಿತೀಶ್ ನ ತಂದೆ ನರಸಿಂಹೇಗೌಡ ಟೀ ಕುಡಿಯಲು ಹೋಗಿದ್ದ, ಈ ವೇಳೆ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ನನ್ನ ಮಗಳನ್ನ ಕೊಂದುಬಿಟ್ಟೆ ಅಲ್ವಾ? ನಿನ್ನ ಮಗಳ ಮದುವೆಯನ್ನ ಹೇಗೆ ಖುಷಿಯಾಗಿ ಮಾಡ್ತೀಯಾ? ನಿನ್ನನ್ನ ಬಿಡಲ್ಲ, ಮಗಳ ಕೊಂದ ನಿನ್ನ ಮಗನನ್ನೂ ಬಿಡಲ್ಲ ಎಂದು ನರಸಿಂಹೇಗೌಡನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಈ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಳೆದ ರಾತ್ರಿ ಪೊಲೀಸರಿಗೆ ಈ ದೃಶ್ಯ ಲಭ್ಯವಾಗಿದೆ.

ಘಟನೆಯ ಹಿನ್ನೆಲೆ:

ಟೀಚರ್ ದೀಪಿಕಾ ಹಾಗೂ ನಿತೀಶ್ ಸ್ನೇಹದಿಂದಿದ್ದರು. ಇದನ್ನು ಗಮನಿಸಿದ ದೀಪಿಕಾಳ ಗಂಡ ಹಾಗೂ ಕುಟುಂಬಸ್ಥರು ನಿತೀಶ್ ಗೆ ಎಚ್ಚರಿಕೆ ನೀಡಿದ್ದರು. ಇದರಿಂದಾಗಿ ಇಬ್ಬರೂ ಅಂತರ ಕಾಯ್ದುಕೊಂಡಿದ್ದರು. ಇದರಿಂದ ಕೋಪಗೊಂಡಿದ್ದ ನಿತೀಶ್ 2024 ಜ. 22ರಂದು ನಿತೀಶ್ ಹುಟ್ಟು ಹಬ್ಬದ ನೆಪದಲ್ಲಿ ದೀಪಿಕಾಳನ್ನು ಬೆಟ್ಟದ ತಪ್ಪಲಿಗೆ ಕರೆಸಿಕೊಂಡು ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿತ್ತು. ಜೈಲು ಸೇರಿದ್ದ ನಿತೀಶ್ ಜಾಮೀನಿನ ಮೇಲೆ ಹೊರ ಬಂದಿದ್ದ. ಈ ನಡುವೆ ಆತನ ತಂಗಿಗೆ ಮದುವೆ ನಿಶ್ಚಯವಾಗಿತ್ತು. ಇಂತಹ ಸಂದರ್ಭದಲ್ಲೇ ದೀಪಿಕಾಳ ತಂದೆ ವೆಂಕಟೇಶ್, ನಿತೀಶ್ ನ ತಂದೆ ನರಸಿಂಹೇಗೌಡನನ್ನು ಬರ್ಬರವಾಗಿ ಹತ್ಯೆ ಮಾಡಿ ಸೇಡು ತೀರಿಸಿಕೊಂಡಿದ್ದಾನೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ