ಮಗಳನ್ನೇ ಅತ್ಯಾಚಾರ ಮಾಡಿದ ತಂದೆಗೇ ಆತ ಬದುಕಿರುವ ತನಕ ಜೈಲು ಶಿಕ್ಷೆ - Mahanayaka
5:12 AM Wednesday 22 - October 2025

ಮಗಳನ್ನೇ ಅತ್ಯಾಚಾರ ಮಾಡಿದ ತಂದೆಗೇ ಆತ ಬದುಕಿರುವ ತನಕ ಜೈಲು ಶಿಕ್ಷೆ

chamarajanagara court
24/07/2023

ಚಾಮರಾಜನಗರ: ಹೆತ್ತ ಮಗಳನ್ನೇ ಅತ್ಯಾಚಾರ ಮಾಡಿ, ಗರ್ಭಿಣಿ ಮಾಡಿದ್ದ ಕಾಮುಕ ತಂದೆಗೆ ಚಾಮರಾಜನಗರ ಜಿಲ್ಲಾ ಮಕ್ಕಳ ಸ್ನೇಹಿ ಹಾಗೂ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಿತಾವಧಿ ತನಕ ಜೈಲು ಶಿಕ್ಷೆ ವಿಧಿಸಿದೆ.

ಚಾಮರಾಜನಗರ ಜಿಲ್ಲೆಯ 48 ವರ್ಷದ ವಿಕೃತ ಕಾಮುಕ ತಂದೆ ಶಿಕ್ಷೆಗೊಳಗಾದ ಅಪರಾಧಿ. ಅಪ್ರಾಪ್ತ ಮಗಳನ್ನು ಈತ ಅತ್ಯಾಚಾರ ಎಸಗಿ, ನಿರಂತರ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿದ್ದ ಈ ಸಂಬಂಧ ಚಾಮರಾಜನಗರ ಠಾಣೆಯೊಂದರಲ್ಲಿ ಪೊಕ್ಸೋ
ಪ್ರಕರಣ ದಾಖಲಾಗಿತ್ತು.

ವಾದ-ಪ್ರತಿವಾದ ಆಲಿಸಿ ನ್ಯಾ.ನಿಶಾರಾಣಿ ಅವರು ವ್ಯಕ್ತಿಯ ಆರೋಪ ಸಾಬೀತಾಗಿದ್ದರಿಂದ 48 ವರ್ಷದ ಅಪರಾಧಿಗೆ ಆತನ ಜೀವಿತಾವಧಿ ತನಕ ಜೈಲುಶಿಕ್ಷೆ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಕೆ.ಯೋಗೇಶ್ ವಾದ ಮಂಡಿಸಿದ್ದರು. ಇನ್ನು, ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರವು 6 ಲಕ್ಷ ರೂ. ಪರಿಹಾರವನ್ನು 30 ದಿನದೊಳಗಾಗಿ ಕೊಡಬೇಕೆಂದು ನ್ಯಾಯಾಧೀಶರು ಸೂಚನೆ ಕೊಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ