ಅಂಚೆ ನೌಕರರ ಸಂಘಗಳ ಒಕ್ಕೂಟ: ಅಖಿಲ ಭಾರತ ಕಾರ್ಯಾಧ್ಯಕ್ಷರಾಗಿ ಬಿ.ಜೆ.ಸುಂದರೇಶ್ ಅವಿರೋಧ ಆಯ್ಕೆ

Mahanayaka–ಜುಲೈ 6ರಂದು ಹಿಮಾಚಲ ಪ್ರದೇಶದ ಸೋಲನ್ ನಲ್ಲಿ ನಡೆದ ಭಾರತೀಯ ಅಂಚೆ ನೌಕರರ ಸಂಘಗಳ ಒಕ್ಕೂಟದ14 ನೇ “ಫೆಡರಲ್ ಕೌನ್ಸಿಲ್”ನಲ್ಲಿ ಶಿವಮೊಗ್ಗದ ಪ್ರಧಾನ ಅಂಚೆ ಕಚೇರಿಯಲ್ಲಿ ಸಾರ್ವಜನಿಕ ಸಂಪರ್ಕ ನಿರೀಕ್ಷಕರಾದ ಬಿ.ಜೆ.ಸುಂದರೇಶ್ ರವರು ಅಖಿಲ ಭಾರತ ಕಾರ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಈ ಸುದ್ದಿ ತಿಳಿದ ತಕ್ಷಣ ಶಿವಮೊಗ್ಗ ಜಿಲ್ಲೆ ಪ್ರಧಾನ ಅಂಚೆ ಕಚೇರಿಯ ಹಿಮಂತರಾಜ ಎಸ್.ಜೆ. ಭಾರತೀಯ ಅಂಚೆ ನೌಕರರ ಸಂಘದ ಸದಸ್ಯರು ಶುಭಾಶಯ ತಿಳಿಸಿದ್ದಾರೆ.
ಅಲ್ಲದೆ ಅಂಚೆ ಸಹಾಯಕರಾದ ಕುಮಾರಿ ಶರಿತ, ಸುರೇಶ ಎ.ರವಿಕುಮಾರ್ ಬಿ.ಕೆ., ಉಪ ಅಂಚೆ ಪಾಲಕರಾದ ಅಬ್ದುಲ್ ಅಜೀಜ್ ಹಾಗೂ ಭಾರತೀಯ ಅಂಚೆ ನೌಕರರ ಸರ್ವ ಸದಸ್ಯರ, .ಎಲ್ಲಾ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD