ಲೋ ಬಿಪಿಯಿಂದ ಮಹಿಳಾ ಪೊಲೀಸ್ ಪೇದೆ ಸಾವು! - Mahanayaka

ಲೋ ಬಿಪಿಯಿಂದ ಮಹಿಳಾ ಪೊಲೀಸ್ ಪೇದೆ ಸಾವು!

saritha
17/07/2025

ಬೀದರ್: ಮಹಿಳಾ ಪೊಲೀಸ್ ಪೇದೆಯೊಬ್ಬರು ಲೋ ಬಿಪಿಯಿಂದ ಸಾವನ್ನಪ್ಪಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

ಸರಿತಾ (28) ಮೃತಪಟ್ಟ ಮಹಿಳಾ ಪೇದೆಯಾಗಿದ್ದಾರೆ.  ಬೀದರ್‌ ನ ಸಬ್ ಅರ್ಬನ್ ಪೊಲೀಸ್ ಠಾಣೆಯ ಪೊಲೀಸ್ ಪೇದೆಯಾಗಿದ್ದ ಸರಿತಾ ಹೆರಿಗೆ ಬಳಿಕ ಲೋ ಬಿಪಿಯಾಗಿ ಸಾವನ್ನಪ್ಪಿದ್ದಾರೆ.

ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚಾವರಂ ಗ್ರಾಮದ ಪೊಲೀಸ್ ಪೇದೆಯಾಗಿದ್ದು, ಹಲವು ವರ್ಷಗಳಿಂದ ಬೀದರ್‌ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸರಿತಾ ಹೈದರಾಬಾದ್‌ ನ ಖಾಸಗಿ ಆಸ್ಪತ್ರೆಯಲ್ಲಿ ಒಂದು ವಾರದ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಒಂದು ವಾರ ನಾರ್ಮಲ್ ಆಗಿದ್ದರು. ಆದ್ರೆ, ಬುಧವಾರ ತಡರಾತ್ರಿ ಏಕಾಏಕಿ ಲೋ ಬಿಪಿಯಿಂದ ಮೃತಪಟ್ಟಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ