ಗಾಝಾ ಮೇಲಿನ ದಾಳಿ: ಫುಟ್ಬಾಲ್ ಪಂದ್ಯಾವಳಿಯಿಂದ ಇಸ್ರೇಲನ್ನು ನಿಷೇಧಿಸಿ ಎಂದ ಫೆಲೆಸ್ತೀನ್ ಗೆ ಫಿಫಾ ಬೆಂಬಲ..? - Mahanayaka

ಗಾಝಾ ಮೇಲಿನ ದಾಳಿ: ಫುಟ್ಬಾಲ್ ಪಂದ್ಯಾವಳಿಯಿಂದ ಇಸ್ರೇಲನ್ನು ನಿಷೇಧಿಸಿ ಎಂದ ಫೆಲೆಸ್ತೀನ್ ಗೆ ಫಿಫಾ ಬೆಂಬಲ..?

17/05/2024


Provided by

ಗಾಝಾದ ಮೇಲೆ ದಾಳಿ ನಡೆಸಿರುವ ಇಸ್ರೇಲ್ ಅನ್ನು ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯಿಂದ ನಿಷೇಧಿಸಬೇಕು ಎಂಬ ಫೆಲೆಸ್ತೀನಿನ ಕೋರಿಕೆಯ ಬಗ್ಗೆ ಪರಿಶೀಲನೆ ನಡೆಸುವುದಾಗಿ ಫಿಫಾ ಹೇಳಿದೆ.

ಫಿಫಾದ ಅಧ್ಯಕ್ಷ ಗಿನ್ನಿ ಇನ್ಫಾಂತಿನಿಯೋ ಅವರು ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾವು ಈ ಕುರಿತಂತೆ ತಜ್ಞರ ಜೊತೆ ಮಾತಾಡುತ್ತೇವೆ..ಈ ಬಗ್ಗೆ ಜುಲೈಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಗಾಜಾದ ಮೇಲೆ ಇಸ್ರೇಲ್ ನ ದಾಳಿ ಇವೆರಡೂ ಕಾರಣಗಳು ಇಸ್ರೇಲನ್ನು ಫೀಫಾ ದಿಂದ ಹೊರ ಹಾಕುವುದಕ್ಕೆ ದಾರಳ ಸಾಕು ಎಂದು ಅನೇಕರು ಹೇಳುತ್ತಿದ್ದಾರೆ. ಫೆಲೆಸ್ತೀನಿ ಫುಟ್ಬಾಲ್ ತಂಡ ಅತ್ಯಂತ ಆಘಾತಕಾರಿ ಸನ್ನಿವೇಶವನ್ನು ಎದುರಿಸುತ್ತಿದೆ ಎಂದು ಕೂಡ ಫೆಲಸ್ತೀನಿಯರು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ