ಅಂಬೇಡ್ಕರ್, ದಲಿತರಿಗೆ ಅವಮಾನ: ಜೈನ್ ವಿವಿ ವಿರುದ್ಧ ಮಲ್ಪೆಯಲ್ಲಿ ದೂರು ದಾಖಲು - Mahanayaka
1:47 AM Wednesday 17 - September 2025

ಅಂಬೇಡ್ಕರ್, ದಲಿತರಿಗೆ ಅವಮಾನ: ಜೈನ್ ವಿವಿ ವಿರುದ್ಧ ಮಲ್ಪೆಯಲ್ಲಿ ದೂರು ದಾಖಲು

jain
12/02/2023

ಮಲ್ಪೆ: ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಪ್ರದರ್ಶಿಸಿದ್ದ ವಿವಾದಾತ್ಮಕ ಕಿರು ನಾಟಕದ ವಿರುದ್ಧ  ಜನಪರ ಹೋರಾಟಗಾರ ಜಯನ್ ಮಲ್ಪೆ, ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.


Provided by

ಜೈನ್ ವಿಶ್ವವಿದ್ಯಾಲಯದ ಮೆನೇಜ್ಮೆಂಟ್ ಸ್ಟಡೀಸ್ ಕೇಂದ್ರದ ಥಿಯೇಟರ್ ಗ್ರೂಪ್ ಕಾಲೇಜು ತಂಡದ ವಿದ್ಯಾರ್ಥಿಗಳು ಪ್ರದರ್ಶಿಸಿದ ಡೆಲ್ರಾಯ್ಸ್ ಬಾಯ್ಸ್ ಮ್ಯಾಡ್ ಆಡ್ಸ್ ನ ಭಾಗವಾಗಿ ಫೆಸ್ಟ್ ನಲ್ಲಿ ಅಂಬೇಡ್ಕರ್ ಮತ್ತು ದಲಿತ ಸಮುದಾಯದ ಕುರಿತು ಅಪಹಾಸ್ಯ ಮತ್ತು ಗೇಲಿ ಮಾಡುತ್ತಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ಕಿಟ್‌ ನಲ್ಲಿ ಕೆಳಜಾತಿಯ ಹಿನ್ನಲೆಯ ವ್ಯಕ್ತಿಯೊಬ್ಬ ಮೇಲ್ಮಾತಿ  ಮಹಿಳೆಯೊಂದಿಗೆ ಡೇಟಿಂಗ್ ಮಾಡಲು ಪ್ರಯತ್ನಿಸಿರುವುದನ್ನು ಪ್ರದರ್ಶಿಸಿದ್ದು, ಈ ವೇಳೆ ಆತ ತಾನು ದಲಿತ, ಕೀಳು ಜಾತಿಯವ ಎಂದು ಹೇಳಿಕೊಂಡಾಗ ಡೋಂಟ್ ಟಚ್ ಮಿ,ಟಚ್ ಮಿ ಎಂಬ ಹಾಡನ್ನು ಗೇಲಿ ಮಾಡುತ್ತಾ ಪ್ಲೇ ಮಾಡಿ ಉದೇಶಪೂರ್ವಕ ಅವಮಾನಿಸಿರುತ್ತಾರೆ ಮತ್ತು ಬಿ.ಆರ್.ಅಂಬೇಡ್ಕರ್ ಅವರನ್ನು ಬಿಯರ್ ಅಂಬೇಡ್ಕರ್ ಎಂದು ಅತ್ಯಂತ ಕೀಳು ಮಟ್ಟದಲ್ಲಿ ಅವಮಾನಿಸಿರುವುದಾಗಿ ಜಯನ್ ಮಲ್ಪೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಈ ದೇಶದ ಭಾರತರತ್ನ ಸಂವಿಧಾನ ಶಿಲ್ಪಿಯನ್ನು ಅತ್ಯಂತ ತುಚ್ಚವಾಗಿ ಅವಮಾನಿಸಿರುವುದು ದೇಶದ್ರೋಹವೆಂದೇ ಪರಿಗಣಿಸಿ, ಜಾತಿ ಹಿನ್ನಲೆಯಲ್ಲಿ ಕಾನೂನುಬಾಹಿರ ಅಶ್ಪೃಷ್ಯತೆ ಮಾಡಿ ನಾಟಕ ಪ್ರದರ್ಶಿಸಿ,ಅಪರಾಧ ಎಸೆಗಿರುವ ಜೈನ್ ಕಾಲೇಜಿನ ವಿದ್ಯಾರ್ಥಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಕಾನೂನುಕ್ರಮ ಕೈಗೊಳ್ಳಬೇಕೆಂದು ಮಲ್ಪೆ ವೃತ್ತ ಪೊಲೀಸ್ ನಿರೀಕ್ಷಕರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ