ಕಾಮಗಾರಿ ಮಾಡಿಕೊಡಿಸುವುದಾಗಿ ಹಣ ಲಪಾಟಾಯಿಸಿದ ಮಾಜಿ ಸಚಿವರ ಗನ್ ಮ್ಯಾನ್ ವಿರುದ್ಧ ಎಫ್ ಐಆರ್ - Mahanayaka
4:38 AM Wednesday 17 - September 2025

ಕಾಮಗಾರಿ ಮಾಡಿಕೊಡಿಸುವುದಾಗಿ ಹಣ ಲಪಾಟಾಯಿಸಿದ ಮಾಜಿ ಸಚಿವರ ಗನ್ ಮ್ಯಾನ್ ವಿರುದ್ಧ ಎಫ್ ಐಆರ್

fir
02/09/2023

ಬೆಂಗಳೂರು: ಕಾಮಗಾರಿ ಮಾಡಿಸಿಕೊಡುತ್ತೇನೆಂದು ಸುಳ್ಳು ಹೇಳಿ ಹಣ ಲಪಟಾಯಿಸಿದ ಮಾಜಿ ಸಚಿವ ಹಾಲಪ್ಪ ಆಚಾರ್ ಗನ್ ಮ್ಯಾನ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.


Provided by

ಸಚಿವರ ಬಳಿ ಕಾಮಗಾರಿ ಮಾಡಿಕೊಡಿಸುವುದಾಗಿ ಹಣ ಲಪಾಟಾಯಿಸಿದ ದೂರು ಇದಾಗಿದೆ.
2020-21ರಲ್ಲಿ ರಾಜಾ ನಾಯ್ಕ್ ದಾವಣಗೆರೆ ಜಿಲ್ಲೆಯ ಶ್ರೀರಾಮ ನಗರ ಗ್ರಾಮದಲ್ಲಿ ಅಂಗವಾಡಿ ಕಟ್ಟಡ ನಿರ್ಮಾಣ ಮಾಡಲು ಸಚಿವರ ಬಳಿ ಅನುದಾನ ಕೇಳಲು ವಿಧಾನಸೌಧಕ್ಕೆ ಬಂದಿದ್ದಾಗ, ಹಾಲಪ್ಪ ಬಸಪ್ಪ ಅಚಾರ್ ಗನ್ ಮ್ಯಾನ್ ರಾಘವೇಂದ್ರ ರಾಜಾ ನಾಯ್ಕ್ ಪರಿಚವಾಗುತ್ತಾರೆ. ಆಗ ಗನ್ ಮ್ಯಾನ್ ರಾಘವೇಂದ್ರ ಸಚಿವರ ಬಳಿ 30 ಕೋಟಿ ರೂ.ಗೆ ಕಾಮಗಾರಿಗೆ ಅನುದಾನ ಮಾಡಿಸಿಕೊಡುತ್ತೇನೆ. ನನಗೆ 12% ಕಮಿಷನ್ ಕೊಡಬೇಕೆಂದಿರುತ್ತಾನೆ.

ಮುಂಗಡವಾಗಿ ಹಣ ಪಡೆದು ಕಾಮಗಾರಿಯೂ ಕೊಡಿಸದೆ ಮುಂಗಡವಾಗಿ ಪಡೆದ ಹಣವೂ ಕೊಡದೆ ವಂಚನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ರಾಘವೇಂದ್ರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಹೆಚ್ ರಾಜಾನಾಯ್ಕ್ ದೂರು ಸಲ್ಲಿಸಿದ್ದರು.

ಆರೋಪಿ ಗನ್ ಮ್ಯಾನ್ ರಾಘವೇಂದ್ರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಾಜಿ ಸಚಿವರ ಗನ್ ಮ್ಯಾನ್ ಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಇತ್ತೀಚಿನ ಸುದ್ದಿ