ಸಿಗರೇಟ್ ಸೇದುವ ಕಾಳಿ ಚಿತ್ರ: ನಿರ್ದೇಶಕಿ ಲೀನಾ ಮಣಿಮೇಕಲ್ ವಿರುದ್ಧ ದೂರು ದಾಖಲು - Mahanayaka
2:28 PM Wednesday 17 - September 2025

ಸಿಗರೇಟ್ ಸೇದುವ ಕಾಳಿ ಚಿತ್ರ: ನಿರ್ದೇಶಕಿ ಲೀನಾ ಮಣಿಮೇಕಲ್ ವಿರುದ್ಧ ದೂರು ದಾಖಲು

kaali
05/07/2022

ಚಿತ್ರದ ಪೋಸ್ಟರ್‌ ನಲ್ಲಿ ಕಾಳಿದೇವಿಯನ್ನು ಅವಮಾನಿಸಿದ ಆರೋಪದ ಮೇಲೆ ಡಾಕ್ಯುಮೆಂಟರಿ ನಿರ್ದೇಶಕಿ ಲೀನಾ ಮಣಿಮೇಕ್ಲಂ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  ಕೆನಡಾದಲ್ಲಿ ತೆರೆಕಾಣುತ್ತಿರುವ ಕಾಲಿ ಚಿತ್ರದ ಪೋಸ್ಟರ್ ಈ ಹಿಂದೆ ವಿವಾದಕ್ಕೀಡಾಗಿತ್ತು.  ಯುಪಿ ಪೊಲೀಸರು ಕ್ರಿಮಿನಲ್ ಪಿತೂರಿ, ಜನರ ನಡುವೆ ದ್ವೇಷವನ್ನು ಹರಡಲು ಪ್ರಯತ್ನ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.


Provided by

ಲೀನಾ ಮಣಿಮೇಕಲಂ ತಮಿಳುನಾಡಿನ ಮಧುರೈ ಮೂಲದವರು.  ಅವರ ಹೊಸ  ಡಾಕ್ಯುಮೆಂಟರಿಯ ಪೋಸ್ಟರ್ ಕಾಳಿ ದೇವಿಯ ವೇಷ ಧರಿಸಿದ ಮಹಿಳೆ ಧೂಮಪಾನ ಮಾಡುತ್ತಿರುವುದನ್ನು ತೋರಿಸುತ್ತಿದೆ.  LGBT ಸಮುದಾಯದ ಧ್ವಜವನ್ನು ಸಹ ಹಿನ್ನೆಲೆಯಲ್ಲಿ ಕಾಣಬಹುದು.  ಇದು ಈವಾಗ ವಿವಾದಕ್ಕೆ ಕಾರಣವಾಗಿದ್ದು,  ಕಾಳಿ ದೇವಿಯನ್ನು ಅವಮಾನಿಸಿದ ಆರೋಪದ ಮೇಲೆ ಮಣಿ ಮೆಕ್ಲಂ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ನಡೆಯುತ್ತಿದೆ.

ಪ್ರತಿಭಟನೆ ಹಿನ್ನೆಲೆ, ಗೋ ಮಹಾಸಭಾದ ಮುಖ್ಯಸ್ಥ ಅಜಯ್ ಗೌತಮ್ ಚಿತ್ರವನ್ನು ನಿಷೇಧಿಸುವಂತೆ ಒತ್ತಾಯಿಸಿ ದೆಹಲಿ ಪೊಲೀಸರು ಮತ್ತು ಗೃಹ ಸಚಿವಾಲಯಕ್ಕೆ ದೂರು ಸಲ್ಲಿಸಿದರು.  #ArrestLeenaManimekalai ಎಂಬ ಹ್ಯಾಶ್‌ ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.

ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಲೀನಾ ವಿರೋಧಗಳಿಂದ ನಾನು  ಕಳೆದುಕೊಳ್ಳಲು ಏನೂ ಇಲ್ಲ.  ಯಾವುದಕ್ಕೂ ಹೆದರದೆ ಮಾತನಾಡುವವರ ಜೊತೆ ಇರಲು ಇಷ್ಟಪಡುತ್ತೇನೆ.  ನನ್ನ ಜೀವಕ್ಕೆ ಬೆಲೆಯಾದರೆ ನಾನು ಅದನ್ನು ಭರಿಸಬಲ್ಲೆ ಎಂದು ಲೀನಾ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿ