ಹಾಸ್ಟೆಲ್ ನಲ್ಲಿ ಅಗ್ನಿ ಅವಘಡ: ನಾಲ್ವರು ವಿದ್ಯಾರ್ಥಿಗಳಿಗೆ  ತೀವ್ರ ಗಾಯ - Mahanayaka

ಹಾಸ್ಟೆಲ್ ನಲ್ಲಿ ಅಗ್ನಿ ಅವಘಡ: ನಾಲ್ವರು ವಿದ್ಯಾರ್ಥಿಗಳಿಗೆ  ತೀವ್ರ ಗಾಯ

fire
12/11/2022


Provided by

ಹೆಬ್ರಿ: ಹೆಬ್ರಿಯ ಜಿಲ್ಲಾ ಪರಿಶಿಷ್ಟ ಪಂಗಡ ವರ್ಗದ ಕಿರಿಯ ಪ್ರಾಥಮಿಕ ಆಶ್ರಮ ಶಾಲೆಯ ಹಾಸ್ಟೆಲ್ ನಲ್ಲಿ ಅಗ್ನಿ ಅವಘಡದಿಂದ ನಾಲ್ವರು ವಿದ್ಯಾರ್ಥಿಗಳು ತೀವ್ರ ಗಾಯಗೊಂಡಿರುವ ಘಟನೆ ಬುಧವಾರ ಸಂಜೆ ವೇಳೆ ಸಂಭವಿಸಿದೆ.

ಗಾಯಗೊಂಡವರನ್ನು ರಾಯಚೂರು ಮೂಲದ ವಿದ್ಯಾರ್ಥಿಗಳಾದ ಶ್ರಿನಿವಾಸ್, ಅಮರೀಶ್, ವಿನೋದ್, ಮನೋಜ್ ಎಂದು ಗುರುತಿಸಲಾಗಿದೆ. ಈ ಮಕ್ಕಳನ್ನು ಹಾಸ್ಟೆಲ್ ‌ನಲ್ಲಿ ಕಸವನ್ನು ಹಾಕಿ ಸ್ಯಾನಿಟೈಸರ್ ಸುರಿದು ಬೆಂಕಿ ಹಚ್ಚಿದ್ದು, ಈ ಸಂದರ್ಭ ಮಕ್ಕಳ ಕೈಯಲ್ಲಿದ್ದ ಸ್ಯಾನಿಟೈಸರ್ ಡಬ್ಬಿಗೆ ಬೆಂಕಿ ಹಿಡಿದು ಸ್ಪೋಟಗೊಂಡಿತು.

ಇದರಿಂದ ಮಕ್ಕಳು ಸುಟ್ಟ ಗಾಯಗೊಂಡಿದ್ದು, ಇವರನ್ನು ಮಣಿಪಾಲ, ಮಂಗಳೂರು ಹಾಗೂ ಹೆಬ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಗೆ ಹಾಸ್ಟೆಲ್ ಅಡುಗೆ ಕೆಲಸದ ಸಾವಿತ್ರಿ ಮತ್ತು ಹಾಸ್ಟೇಲ್ ವಾರ್ಡನ್ ಅವರ ನಿರ್ಲಕ್ಷವೇ ಕಾರಣ ಎಂದು ದೂರಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬ್ರಹ್ಮಾವರ ತಾಲೂಕಿನ ಆರೂರು ಗ್ರಾಮದ ಮುಂಡ್ಕಿನ್ ಜೆಡ್ಡು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ 9:30ಕ್ಕೆ ನಡೆದಿದೆ.

ಆರೂರು ಗ್ರಾಮದ ನಿವಾಸಿ 58 ವರ್ಷದ ಶ್ರೀನಿವಾಸ ಕುಲಾಲ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಯಾರೊಂದಿಗೂ ಸರಿಯಾಗಿ ಮಾತನಾಡದೆ ಒಬ್ಬರೇ ಇರುತ್ತಿದ್ದರು. ಆಗಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರು ಎನ್ನಲಾಗಿದೆ.

ಇದೇ ಚಿಂತೆಯಲ್ಲಿದ್ದ ಶ್ರೀನಿವಾಸ್ ಅವರು ಮನೆಯ ಕೊಠಡಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಉಡುಪಿ: ನೀರು ಸರಬರಾಜು ವ್ಯತ್ಯಯ

ಉಡುಪಿ:  ಹಿರಿಯಡ್ಕದ ಬಜೆ ನೀರು ಸರಬರಾಜು ಘಟಕದಲ್ಲಿ ನವೆಂಬರ್ 15 ರಂದು ವಿದ್ಯುತ್ ಸ್ಥಗಿತಗೊಳಿಸುವುದರಿಂದ, ಅಂದು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ  ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪ್ರಕಟಣೆ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ