ಮರದಲ್ಲಿ ಸಿಲುಕಿ 1 ಗಂಟೆಗೂ ಹೆಚ್ಚು ಕಾಲ ನರಳಾಡಿದ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ ದಳ

ಚಿಕ್ಕಮಗಳೂರು: ಕಡೂರು ತಾಲೂಕು, ದೊಡ್ಡ ಪಟ್ಟಣಗೆರೆಯ ದೇವಸ್ಥಾನಕ್ಕೆ ಸಂಬಂಧಿಸಿದ ಹುಣಸೇಮರವನ್ನು ಕಡಿಯುವ ಸಂದರ್ಭ ಭಯಾನಕ ಘಟನೆ ಸಂಭವಿಸಿದೆ.
ಮರದ ಮೇಲೆ ಹತ್ತಿ ಕೆಲಸ ಮಾಡುತ್ತಿದ್ದ ಸಯ್ಯದ್ ಎಂಬ ವ್ಯಕ್ತಿ, ಮರದ ಎರಡು ಕೊಂಬೆಗಳ ಮಧ್ಯೆ ಏಕಾಏಕಿ ಮುರಿದು ಬಿದ್ದ ಕೊಂಬೆಯಿಂದಾಗಿ ಸಿಲುಕಿಕೊಂಡಿದ್ದಾರೆ. ಈ ಘಟನೆ ದುರಂತ ತಿರುವು ಪಡೆದುಕೊಂಡಿದ್ದು, ಮರದ ತುದಿಯಲ್ಲಿ ಗಂಟೆಗೂ ಹೆಚ್ಚು ಸಯ್ಯದ್ ಗಂಭೀರವಾಗಿ ಗಾಯಗೊಂಡು ನರಳಾಡಿದ್ದಾರೆ. ಅವರ ಕಾಲು ಮತ್ತು ಬೆನ್ನಿಗೆ ತೀವ್ರ ಗಾಯಗಳಾಗಿದೆ.
ಸ್ಥಳಕ್ಕೆ ತಕ್ಷಣ ಆಗಮಿಸಿದ ಅಗ್ನಿಶಾಮಕ ದಳ, ಸಯ್ಯದ್ ಅವರನ್ನು ಮರದಿಂದ ಸುರಕ್ಷಿತವಾಗಿ ಕೆಳಗೆ ತರಲು ಯಶಸ್ವಿಯಾಗಿದ್ದಾರೆ. ಬಳಿಕ ಅವರನ್ನು ತಕ್ಷಣ ಕಡೂರು ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಈ ಘಟನೆ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD