ಜಗ್ಗೇಶ್ ಗೆ ಬುದ್ಧಿ ಹೇಳಿದ ಫೈರಿಂಗ್ ಸ್ಟಾರ್ ಹುಚ್ಚವೆಂಕಟ್ - Mahanayaka

ಜಗ್ಗೇಶ್ ಗೆ ಬುದ್ಧಿ ಹೇಳಿದ ಫೈರಿಂಗ್ ಸ್ಟಾರ್ ಹುಚ್ಚವೆಂಕಟ್

hucha venkat
05/11/2024


Provided by

ನಿರ್ದೇಶಕ, ನಟ ಗುರುಪ್ರಸಾದ್ ಅವರ ಸಾವಿನ ಬೆನ್ನಲ್ಲೇ ಮಾಧ್ಯಮಗಳಲ್ಲಿ ಬೇಕಾಬಿಟ್ಟಿ ನಾಲಿಗೆ ಹರಿಯಬಿಟ್ಟಿದ್ದ ಜಗ್ಗೇಶ್ ಗೆ ಇದೀಗ ಹುಚ್ಚ ವೆಂಕಟ್ ಕೂಡ ಬುದ್ಧಿ ಮಾತು ಹೇಳಿದ್ದಾರೆ.

ನವೆಂಬರ್ 3ರಂದು ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿನ ಅಪಾರ್ಟ್‌ಮೆಂಟ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗುರುಪ್ರಸಾದ್ ಮೃತದೇಹ ಪತ್ತೆಯಾಗಿತ್ತು. ಆರ್ಥಿಕ ಸಮಸ್ಯೆಯಿಂದ ಗುರುಪ್ರಸಾದ್ ತಮ್ಮ ಜೀವನವನ್ನು ಕೊನೆಗಾಣಿಸಿರುವುದಾಗಿ ಪೊಲೀಸ್ ಇಲಾಖೆ ಕೂಡ ಹೇಳಿತ್ತು.

ಈ ನಡುವೆ ಗುರುಪ್ರಸಾದ್ ಸಾವಿನ ಸಂದರ್ಭದಲ್ಲಿ ಕೂಡ ನಟ ಜಗ್ಗೇಶ್ ಗುರುಪ್ರಸಾದ್ ವಿರುದ್ಧ ಆತ ಚಟಗಾರ, ಕುಡುಕ, ಹಣ ಪೋಲುಮಾಡುವವನು ಎಂಬಂತೆ ವೈಯಕ್ತಿಕ ದಾಳಿ ನಡೆಸಿದ್ದರು. ಅಲ್ಲದೇ ಗುರುಪ್ರಸಾದ್ ಗೆ ಚರ್ಮರೋಗ ಇತ್ತು. ಕೆರೆದರೆ ಕೀವು ಬರುತ್ತಿತ್ತು. ಊಟಕ್ಕೆ ಕೂತರೆ, ನಮ್ಮ ತಟ್ಟೆಗೆ ಕೈ ಹಾಕುತ್ತಿದ್ದ. ಸೆಟ್ ಗೆ ಇತ್ತೀಚೆಗೆ ಬಾಟಲ್ ತರ್ತಿದ್ದ ಎಂಬಂತೆ ಮನಸೋ ಇಚ್ಛೆ ಗುರುಪ್ರಸಾದ್ ಅವರ ವ್ಯಕ್ತಿತ್ವಕ್ಕೆ ಅವಮಾನಿಸಿದ್ದರು.

ಗುರುಪ್ರಸಾದ್ ಬಗ್ಗೆ ಜಗ್ಗೇಶ್ ನೀಡಿರುವ ಹೇಳಿಕೆಗೆ ಹುಚ್ಚವೆಂಕಟ್ ಪ್ರತಿಕ್ರಿಯಿಸಿದ್ದಾರೆ. ‘ಗುರು ಪ್ರಸಾದ್ ಅವರ ಬಗ್ಗೆ ಜಗ್ಗೇಶ್ ಮಾತನಾಡಿದ್ದು ಬಹಳ ಬೇಸರ ಆಯ್ತು. ಈಗ ಗುರು ಪ್ರಸಾದ್ ಅವರು ಇಲ್ಲ, ಅವರ ಮನೆಯವರು ಇನ್ನೂ ನೋವಿನಲ್ಲಿ ಇರುತ್ತಾರೆ. ಆ ನೋವಿನಲ್ಲಿ ಇರುವವರಿಗೆ ಇನ್ನೂ ನೋವು ಬೇಕಾ?. ತಪ್ಪು ಸರ್.. ಒಬ್ಬ ಮನುಷ್ಯ ಬದುಕಿರುವಾಗ ಮಾತನಾಡಿದ್ದರೆ ತಪ್ಪು ಆಗುತ್ತೆ. ಇನ್ನು ತೀರಿಕೊಂಡಿರುವವರ ಬಗ್ಗೆ ಏನ್ ಏನೋ ಮಾತನಾಡಿ, ಅವರ ಫ್ಯಾಮಿಲಿ ಮೆಂಬರ್ ಗಳಿಗೆ ಏನಾಗಬಹುದು? ಮೊದಲೇ ಅವರ ಕುಟುಂಬ ನೋವಿನಲ್ಲಿ ಇದ್ದಾರೆ. ನಿಮ್ಮ ಮಾತುಗಳನ್ನು ಕೇಳಿ, ಇನ್ನೂ ನೋವಾಗುತ್ತದೆ. ಒಬ್ಬ ಮನುಷ್ಯ ಸತ್ತ ಮೇಲೆ ಅವರ ಬಗ್ಗೆ ಮಾತನಾಡಬಾರದು. ಜಗ್ಗೇಶ್ ಸರ್ ಇನ್ನು ಮುಂದೆ ಅವರ ಬಗ್ಗೆ ಯಾರ ಬಳಿನೂ ಮಾತನಾಡಬೇಡಿ. ಬೈ ಪ್ರಂ ಫೈಟಿಂಗ್ ಅಂಡ್ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್” ಎಂದಿದ್ದಾರೆ.

“ದಯವಿಟ್ಟು ಹೇಳ್ತಿನಿ. ಯಾವುದೇ ಮನುಷ್ಯ ಸತ್ತ ಮೇಲೆ ಮಾತನಾಡಬಾರದು. ಬದುರೋವಾಗಲೇ ಮಾತನಾಡುವುದು ತಪ್ಪು. ತುಂಬ ಚಿಕ್ಕವನು ನಾನು ನಿಮಗೆ ಬುದ್ದಿ ಹೇಳೋವಷ್ಟು ದೊಡ್ಡೋನಲ್ಲ. ಆದರೆ, ನೋವಾಯ್ತು ಸರ್. ನೋವಾಯ್ತು. ಒಬ್ಬ ಮನುಷ್ಯ ಸತ್ತಮೇಲೆ ಅವರ ಬಗ್ಗೆ ಹೀಗೆಲ್ಲ ಮಾತನಾಡಬಾರದು ಸರ್. ಅವರ ಕುಟುಂಬಕ್ಕೂ ಹೇಳ್ತಿನಿ ತಲೆ ಕೆಡಿಸಿಕೊಳ್ಳಬೇಡಿ. ಏನೋ ಒಂದಷ್ಟು ಮಿಸ್ ಅಂಡರ್ ಸ್ಟ್ಯಾಂಡಿಂಗ್ ಇರುತ್ತೆ. ಗುರುಪ್ರಸಾದ್ ಹಾಗಲ್ಲ” ಎಂದು ಜಗ್ಗೇಶ್ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ