ಜನರನ್ನು ಕಾಡ್ತಿದೆ ಬೆಲೆ ಏರಿಕೆ: ಬರೆ ಎಳೆದ ಮೀನಿನ ದರ ಹೆಚ್ಚಳ - Mahanayaka

ಜನರನ್ನು ಕಾಡ್ತಿದೆ ಬೆಲೆ ಏರಿಕೆ: ಬರೆ ಎಳೆದ ಮೀನಿನ ದರ ಹೆಚ್ಚಳ

24/06/2024


Provided by

ರಾಜ್ಯದಲ್ಲಿ ಮೀನಿನ ಬೆಲೆ ಗಗನಕ್ಕೇರುತ್ತಿದೆ. ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಯಂತ್ರ ಚಾಲಿತ ಬೋಟ್ ಮೂಲಕ ಮೀನುಗಾರಿಕೆಗೆ ರಾಜ್ಯದಲ್ಲಿ ನಿಷೇಧ ಹೇರಳಾಗಿದೆ. ಆದ್ದರಿಂದ ಸಾಂಪ್ರದಾಯಿಕ ಮೀನುಗಾರಿಕೆಗೆ ಮಾತ್ರ ಅವಕಾಶ ಇದೆ. ಆದರೆ ಈ ಮೀನುಗಾರಿಕೆಯಿಂದ ರಾಜ್ಯದ ಜನರ ಬೇಡಿಕೆಗೆ ತಕ್ಕಂತೆ ಮೀನನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ನೆಲೆಯಲ್ಲಿ ಓಡಿಸ್ಸಾ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಂದ ರಾಜ್ಯಕ್ಕೆ ಮೀನು ಆಮದು ಮಾಡಲಾಗುತ್ತಿದ್ದು ಸಹಜವಾಗಿಯೇ ಮೀನಿನ ಬೆಲೆ ಗಗನಕ್ಕೇರುತ್ತಿದೆ.

ಪ್ರತಿದಿನ ಉಡುಪಿಯ ಮಲ್ಪೆ ಬಂದರಿಗೆ 15 ಟ್ರಕ್ ನಲ್ಲಿ ಟನ್ ಗಟ್ಟಲೆ ಮೀನುಗಳು ಬರುತ್ತಿವೆ. ಪಶ್ಚಿಮ ಕರಾವಳಿಯ ಕೇರಳದಿಂದ ಹಿಡಿದು ಗುಜರಾತ್ ನ ವರೆಗೆ ಮೀನುಗಾರಿಕೆಗೆ ನಿಷೇಧ ಇದೆ. ಆದರೆ ಪೂರ್ವ ಕರಾವಳಿಯಲ್ಲಿ ಈ ನಿಷೇಧ ಇಲ್ಲ. ಯಾವಾಗ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಆರಂಭವಾಗುತ್ತದೋ ಆಗ ಪೂರ್ವ ಕರಾವಳಿಯ ಮೀನುಗಾರಿಕೆಗೆ ನಿಷೇಧ ಬೀಳುತ್ತದೆ. ಇದೇ ವೇಳೆ ಸಾಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಇದ್ದರೂ ಭಾರಿ ಗಾಳಿಯಿಂದಾಗಿ ಮೀನುಗಾರಿಕೆ ಕಷ್ಟವಾಗುತ್ತಿದೆ.. ಈ ಹಿನ್ನೆಲೆಯಲ್ಲಿ ಮೀನಿನ ಬರ ಎದುರಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ