ಬಾಲಕನ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಫಿಟ್ ಬುಲ್ ನಾಯಿ: ನಿಷೇಧಿತ ತಳಿ ಸಾಕಿದ್ದ ಮಾಲಿಕನಿಗೆ ಸಂಕಷ್ಟ
18/08/2023
ಗಾಜಿಯಾಬಾದ್: ಫಿಟ್ ಬುಲ್ (Pitbull) ನಾಯಿಯೊಂದು ಬಾಲಕನ ಮೇಲೆ ಮಾರಣಾಂತಿಕ ದಾಳಿ ನಡೆಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಇಲ್ಲಿನ ಮೋದಿ ನಗರದ ಗೋವಿಂದ್ ಉದ್ಯಾನವನದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಏಕಾಏಕಿ ನಾಯಿ ಮುಗಿಬಿದ್ದಿದೆ.
ನಾಯಿಯ ದಾಳಿಯಿಂದಾಗಿ ಬಾಲಕನ ಮುಖ ಹಾಗೂ ಎದೆ ಸೇರಿದಂತೆ ಹಲವು ಭಾಗಗಳಿಗೆ ನಾಯಿ ಗಂಭೀರವಾಗಿ ಗಾಯಗೊಳಿಸಿದ್ದು, ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಯಿಯ ಮಾಲಿಕನನ್ನು ರಿಂಕು ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಕ್ರಮಣಕಾರಿ ತಳಿಯ ಫಿಟ್ ಬುಲ್ ಸಾಕುವುದನ್ನು ನಿಷೇಧಿಸಲಾಗಿದೆ. ಆದ್ರೆ, ನಾಯಿಯ ಮಾಲಿಕ ರಿಂಕುಗೆ ಸಂಬಂಧಿಕರೊಬ್ಬರು ಈ ನಾಯಿಯನ್ನು ಉಡುಗೊರೆಯಾಗಿ ನೀಡಿದ್ರಂತೆ, ಇದೀಗ ಸಂಬಂಧಿಕರು ನೀಡಿದ ಉಡುಗೊರೆ ನಾಯಿ ಇದೀಗ ರಿಂಕುಗೆ ಕಾನೂನಿನ ದೊಡ್ಡ ಸಂಕಷ್ಟವನ್ನು ಸೃಷ್ಟಿಸಿದೆ.



























