ವಂಚನೆ ಕೇಸ್: ಐವರು ಆರೋಪಿಗಳು ಅರೆಸ್ಟ್, 4 ಕಾರು ಸಹಿತ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಶ - Mahanayaka
5:21 AM Saturday 6 - September 2025

ವಂಚನೆ ಕೇಸ್: ಐವರು ಆರೋಪಿಗಳು ಅರೆಸ್ಟ್, 4 ಕಾರು ಸಹಿತ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಶ

banglore
07/11/2023

ಬೆಂಗಳೂರು: ಬೆಂಗಳೂರು ಕೇಂದ್ರ ವಿಭಾಗ, ಹೆಗ್ರೌಂಡ್ ಪೊಲೀಸ್ ರಾಣೆಯ ಪೊಲೀಸರು ವಂಚನೆ ಎಸಗಿದ ಐವರು ವ್ಯಕ್ತಿಗಳನ್ನು ವಶಕ್ಕೆ ಪಡೆದು ಬಂಧಿತರಿಂದ 65 ಲಕ್ಷ ನಗದು ಹಣ, 8.50 ಲಕ್ಷ ರೂ ಮೌಲ್ಯದ ಚಿನ್ನಾಭರಣ, ಸಾಮಗ್ರಿಗಳು ಸೇರಿದಂತೆ ನಾಲ್ಕು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.


Provided by

ಅ.3ರಂದು ರಾಧಾಕೃಷ್ಣ ಎಂಬುವರನ್ನು ಜಮೀನು ಖರೀದಿ ವಿಷಯದಲ್ಲಿ 1,00.90.000 ರೂ.ಗಳನ್ನು ವಂಚಿಸಿ, ಸಂಜಯ್, ಶ್ರೀನಿವಾಸ್, ಲೋಕಾಚಾರಿ, ಪ್ರಭಾಕರ ರಸ್ತೆ ಮತ್ತು ಇತರರು ಪರಾರಿಯಾಗಿರುತ್ತಾರೆ.ಇವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈ ಸಂಬಂಧ ಕಾರ್ಯಪ್ರವೃತ್ತರಾದ ಪೊಲೀಸರು ಅ.17ರಂದು ಕೃತ್ಯವೆಸಗಿದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಪ್ರಕರಣದಲ್ಲಿ ಅಲ್ಲಿ ಖರೀದಿ ವಿಚಾರವಾಗಿ ನಕಲು ದಾಖಲಾತಿ ಪಡೆದಿರುವುದು ತಿಳಿದುಬಂದಿರುತ್ತದೆ. ಪಿರ್ಯಾದುದಾರರ ಸ್ನೇಹಿತರಿಂದಲೂ ಮೋಸದಿಂದ ಹಣ ಪಡೆದಿರುವುದು ಕಂಡು ಬಂದಿರುತ್ತದೆ.

ಕೇಂದ್ರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶೇಷಾಪುರಂ ಉಪ ವಿಭಾಗರವರ ಮಾರ್ಗದರ್ಶನದಲ್ಲಿ ಹೈಗ್ರೌಂಡ್ ಪೊಲೀಸ್ ಠಾಣೆಯ ಪೋಲೀಸ್ ಇನ್ಸ್ಪೆಕರ್ ಭರತ್ ಡಿ. ನೇತೃತ್ತದಲ್ಲಿ ದೂರುದಾರರ ಮಾಹಿತಿ ಮೇರೆಗೆ ಐವರು ಆರೋಪಿಗಳನ್ನು ಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿತರಿಂದ 65 ಲಕ್ಷ ನಗದು ಹಣ, 8.50 ಲಕ್ಷ ರೂ ಮೌಲ್ಯದ ಅನ್ನಾಭರಣ, ಬೆಟ್ಟ ಸಾಮಗ್ರಿಗಳು, ಒಂದು ಇನ್ನೊವಾ ಕ್ರಿಸ್ಟಾ ಕಾರು, ಒಂದು ಮಾರುತಿ ಸುಜಕಿ ಆಲ್ಟೋ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಹ್ಯುಂಡೈ ಕಾರು ಮತ್ತು ಒಂದು ಮಾರುತಿ ಸುಜಕಿ ಕಾರನ್ನು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ಹೆಚ್ಚಿನ ತನಿಖೆ ಮುಂದುವರೆದಿರುತ್ತದೆ.

 

ಇತ್ತೀಚಿನ ಸುದ್ದಿ