ಭವಿಷ್ಯ ಹೇಳುವ ನೆಪದಲ್ಲಿ ರೈತನ ಉಂಗೂರ ಕದ್ದ ಐವರ ಬಂಧನ

ಚಿತ್ರದುರ್ಗ: ಸಾಧುಗಳ ವೇಷ ಧರಿಸಿ ಭವಿಷ್ಯ ಹೇಳುವ ನೆಪದಲ್ಲಿ ರೈತನ ಉಂಗೂರ ಕದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಚಿಕ್ಕಗೊಂಡನಹಳ್ಳಿ ಬಳಿ ನಡೆದಿದೆ.
ಕಮಲನಾಥ್, ಸಂತೋಷ್ ನಾಥ್, ಚೈನ್ ನಾಥ್ ಚೌಹಾಣ್, ಶ್ರವಣ್ ಜೋಗಿ, ಚಾಲಕ ಟೋನಿಯಾ ಬಂಧಿತ ಆರೋಪಿಗಳಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 50ರ ಬಳಿ ರೈತ ರವಿಕುಮಾರ್ ಎಂಬವರನ್ನು ಕಾರಿನಲ್ಲಿ ಕೂರಿಸಿ ಭವಿಷ್ಯ ಹೇಳುವುದಾಗಿ ಹೇಳಿದ್ದರು. ಈ ವೇಳೆ ಉಂಗೂರ ಕಸಿದು ಬಾಯಿಗೆ ಹಾಕಿಕೊಂಡು, ರವಿಕುಮಾರ್ ಅವರನ್ನು ಕೆಳಗಿಳಿಸಿ ಆರೋಪಿಗಳು ಎಸ್ಕೇಪ್ ಆಗಿದ್ದರು.
ಘಟನೆಯಿಂದ ನೊಂದ ರವಿ ಕುಮಾರ್ ತುರುವನೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ನಾಲ್ವರ ಸಹಿತ ಓರ್ವ ಚಾಲಕನನ್ನೂ ಬಂಧಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD