ಫುಡ್ ಡೆಲಿವರಿ ಬಾಯ್ ಅಪಹರಣ: 6 ಮಂದಿ ಆರೋಪಿಗಳ ಬಂಧನ - Mahanayaka
11:02 AM Thursday 16 - October 2025

ಫುಡ್ ಡೆಲಿವರಿ ಬಾಯ್ ಅಪಹರಣ: 6 ಮಂದಿ ಆರೋಪಿಗಳ ಬಂಧನ

arrest
01/03/2022

ಜೈಪುರ: ಸೇಡು ತೀರಿಸಿಕೊಳ್ಳುವ ಸಲುವಾಗಿ ಫುಡ್ ಡೆಲಿವರಿ ಬಾಯ್‍ನನ್ನು ಅಪಹರಣ ಮಾಡಿದ್ದ ಆರು ಮಂದಿ ಆರೋಪಿಗಳನ್ನು ರಾಜಸ್ಥಾನದ ಗುರುಗ್ರಾಮ್ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.


Provided by

ಆರೋಪಿಗಳನ್ನು ರಾಜಸ್ಥಾನದ ಅಲ್ವಾರ್ ಮೂಲದ ಲೋಕೇಶ್, ದೌಸಾ ಜಿಲ್ಲೆಯ ಸುಮನ್ ಕುಮಾರ್ ಯೋಗಿ, ಛೋಟು, ದೇವಿ ರಾಮ್, ರಿಂಕು ಮತ್ತು ಧರ್ಮೇಂದ್ರ ಎಂದು ಗುರುತಿಸಲಾಗಿದೆ.

ಉಮರ್‍ಪುರ ನಂಗ್ಲಿ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಪಿಂಟು ಲಾಲ್ ಮೀನಾ ಅವರ ಮೇಲೆ ಹಣದ ವಿಚಾರವಾಗಿ ಶನಿವಾರ ಮಧ್ಯಾಹ್ನ ಕೆಲವು ಮಂದಿ ಹಲ್ಲೆ ನಡೆಸಿದ್ದರು. ನಂತರ ಭಾನುವಾರ ಮುಂಜಾನೆ ಮುಖಕ್ಕೆ ಮುಸುಕು ಹಾಕಿಕೊಂಡು ಬಂದ ಕೆಲವರು ಮತ್ತೆ ಪಿಂಟು ಲಾಲ್ ಮೀನಾ ಮೇಲೆ ಹಲ್ಲೆ ನಡೆಸಿ ಬೈಕ್‍ನಲ್ಲಿ ಕರೆದುಕೊಂಡು ಹೋಗಿದ್ದಾರೆ.

ಈ ಕುರಿತಂತೆ ಮಾಹಿತಿ ದೊರೆತ ಪೊಲೀಸರು ರಾಜಸ್ಥಾನದ ಮಂದಾವರ್ ಪ್ರದೇಶಕ್ಕೆ ತಲುಪಿ ಪಿಂಟು ಲಾಲ್ ಅವರನ್ನು ರಕ್ಷಿಸಿದ್ದು, ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಆರೋಪಿಗಳ ಬಳಿ ಇದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ

ರಷ್ಯಾದಿಂದ ಶೆಲ್‌ ದಾಳಿ; 70 ಉಕ್ರೇನ್‌ ಸೈನಿಕರ ಸಾವು

ಮಲಗಿದ್ದಲ್ಲೇ ಯುವಕ ಅನುಮಾನಾಸ್ಪದ ಸಾವು

ರಾಷ್ಟ್ರಧ್ವಜಕ್ಕೆ ಅವಮಾನ: ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲು

ರಷ್ಯಾ-ಉಕ್ರೇನ್ ಯುದ್ದ: ತನ್ನ ಸರ್ಕಾರದ ವಿರುದ್ದವೇ ಹರಿಹಾಯ್ದ ಬಿಜೆಪಿ ಸಂಸದ ವರುಣ್ ಗಾಂಧಿ

 

ಇತ್ತೀಚಿನ ಸುದ್ದಿ